Friday, November 22, 2024

ಸರ್ಕಾರಿ ಕಾರಿನಲ್ಲೇ ಸಕ್ಕರೆ ಸಚಿವರ ಅಕ್ಕರೆಯ ಮಗಳ ಸಂಚಾರ

ಬೆಂಗಳೂರು: ಇತ್ತೀಚೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಚೇರಿಯಲ್ಲಿ ಸಹೋದರ ಅಂಧ ದರ್ಬಾರ್ ನಡೆಸಿದ್ದರು. ವಿಧಾನಸೌಧದ ಕೊಠಡಿಯಲ್ಲಿ ಸಚಿವೆ ಹಾಗೂ ಅಧಿಕಾರಿಗಳು ಇದ್ದರೂ ಜನರ ಪತ್ರಗಳಿಗೆ ಸಹಿ ಹಾಕಿದ್ದರು. ಗೃಹಲಕ್ಷ್ಮಿ ಗೊಂದಲದ ಬಗ್ಗೆ ಮಾಹಿತಿ ಪಡೆಯಲು ತೆರಳಿದ್ದ ಮಾಧ್ಯಮಗಳ ಮೇಲೆ ದರ್ಪ ಪ್ರದರ್ಶಿಸಿದ್ದರು. ಇದೀಗ, ಮತ್ತೊಬ್ಬ ಕಾಂಗ್ರೆಸ್ ಸಚಿವರ ಮಕ್ಕಳು ಅಪ್ಪನ ಹೆಸರಲ್ಲಿ ದರ್ಬಾರ್ ಮಾಡುತ್ತಿದ್ದಾರೆ.

ಹೌದು, ಸರ್ಕಾರಿ ಕಾರಿನಲ್ಲೇ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮಗಳು ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ಸದಾಶಿವನಗರದಲ್ಲಿ ಸಂಯುಕ್ತ ಪಾಟೀಲ್ ಸರ್ಕಾರಿ ಕಾರಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ಅಪ್ಪ ಮಂತ್ರಿಯಾಗಿದ್ದು, ಮಗಳು ಸರ್ಕಾರದ ಕಾರಲ್ಲಿ ಓಡಾಟ ಮಾಡುತ್ತ

ಇದನ್ನೂ ಓದಿ: ಪರಿಷತ್ಗೆ ನಾಮ ನಿರ್ದೇಶನ : ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ ಕಾಂಗ್ರೆಸ್, ಉಮಾಶ್ರೀಗೆ ನಿರಾಸೆ

ಸರ್ಕಾರಿ ವಾಹನ ಸರ್ಕಾರಿ ಕೆಲಸಕ್ಕೆ ಸೀಮಿತವಾಗದೇ ಕುಟುಂಬದ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ನಿಯಮಗಳ ಪ್ರಕಾರ, ಸಚಿವರು ಸಹ ಸರ್ಕಾರಿ ನೌಕರರ ಸಾಲಿಗೆ ಸೇರುವುದರಿಂದ ಅವರಿಗೆ ಸರ್ಕಾರದ ಕಾರನ್ನು ನೀಡಲಾಗುತ್ತೆ. ಈ ರೀತಿ ನೀಡಲಾದ ಕಾರನ್ನು ಕೇವಲ ಅವರು ಮಾತ್ರ ಬಳಸಬೇಕು. ಬೇರೆಯವರು ಬಳಸಬಾರದು. ಆದ್ರೆ ಇಲ್ಲಿ ಸಚಿವರ ಮಗಳು ಕಾರಿನಲ್ಲಿ ಕೂತು ಸದಾಶಿವನಗರದ ರೌಂಡ್ಸ್ ಹಾಕಿದ್ದಾರೆ.

 

RELATED ARTICLES

Related Articles

TRENDING ARTICLES