Wednesday, January 22, 2025

ಮುಂಗಾರು ಚುರುಕು : ಜೂನ್ 25ರಿಂದ 15 ಜಿಲ್ಲೆಗಳಲ್ಲಿ ಮಳೆರಾಯನದ್ದೇ ಆರ್ಭಟ

ಬೆಂಗಳೂರು: ರಾಜ್ಯಾದ್ಯಂತ ಜೂನ್​ 25ರಿಂದ ಮುಂಗಾರು ಚುರುಕುಗೊಳ್ಳಲಿದ್ದು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಯಾವೆಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..? 

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಇನ್ನುಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ: 5ನೇ ದಿನ ಕಳೆದರೂ ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸರ್ವರ್‌ ಪ್ರಾಬ್ಲಮ್

ಬರಗೂರು, ಕುಂದಾಪುರ, ಚಾಮರಾಜನಗರ, ಮಳವಳ್ಳಿ, ಸಾಲಿಗ್ರಾಮ, ಜಿಕೆವಿಕೆ, ಹರದನಹಳ್ಳಿ, ಸುಳ್ಯ, ಮಂಗಳೂರು ವಿಮಾನ ನಿಲ್ದಾಣ, ಹೆಸರಘಟ್ಟ, ಸುತ್ತೂರು, ಶಿವಮೊಗ್ಗ, ಕಾರ್ಕಳ, ಕೋಟ, ಮುಲ್ಕಿ, ಸಂತೆ ಬೆನ್ನೂರು, ಚನ್ನಗಿರಿ, ಹೊನ್ನಾಳಿ, ಹೊಸಕೋಟೆ, ಯಲಹಂಕ, ಸಿಂಧನೂರು, ಸಿದ್ದಾಪುರ, ಚಿಕ್ಕಮಗಳೂರು, ದೇವನಹಳ್ಳಿ, ಉತ್ತರಹಳ್ಳಿ, ತಿಪಟೂರು, ಮದ್ದೂರು, ಮೂಡಿಗೆರೆಯಲ್ಲಿ ಮಳೆಯಾಗಲಿದೆ.

 

 

RELATED ARTICLES

Related Articles

TRENDING ARTICLES