ಬೆಂಗಳೂರು: ಮುಂದಿನ ಲೋಕಸಭೆಯಲ್ಲಿ ಬಿಜೆಪಿಯನ್ನ ಸಂಘಟಿತವಾಗಿ ಎದುರಿಸುವ ಸಲುವಾಗಿ ಕೇಂದ್ರ ಸರ್ಕಾರವನ್ನು ಮಣಿಸಲು ವಿಪಕ್ಷಗಳು ಒಗ್ಗೂಡಿ ನಾಳೆ ಪಾಟ್ನಾದಲ್ಲಿ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಜೆಡಿಯು, ಟಿಎಂಸಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಭಾಗಿಯಾಗುತ್ತಿವೆ. ಆದರೆ, ಈ ಸಭೆಯಲ್ಲಿ ಜೆಡಿಎಸ್ ಭಾಗಿಯಾಗದಿರಲು ನಿರ್ಧರಿಸಿದೆ.
ಜೆಡಿಎಸ್ನ ಈ ನಿರ್ಧಾರಕ್ಕೆ ಕಾರಣಗಳೇನು..?
- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖ ರಾಜಕೀಯ ಶತ್ರು. ಹೀಗಾಗಿ ಪ್ರತಿಪಕ್ಷಗಳ ಮೈತ್ರಿಯಲ್ಲಿ ಕಾಂಗ್ರೆಸ್ ಇರೋದರಿಂದ ಜೆಡಿಎಸ್ಗೆ ಲಾಭವಿಲ್ಲ.
- ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಜೆಡಿಎಸ್ ದೊಡ್ಡ ಹೊಡೆತ ನೀಡುತ್ತಿದೆ. ಕಳೆದ ಬಾರಿಯ ಲೋಕಸಭಾ ಮೈತ್ರಿ ಪ್ರಯೋಜನಕ್ಕೆ ಬಂದಿಲ್ಲ.
- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಮೈತ್ರಿ ಇಲ್ಲದೇ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.
- ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ಗೆ ಮನಸ್ಸಿಲ್ಲ.ಮೈತ್ರಿ ಮಾತು ಕೂಡ ಎತ್ತುತ್ತಿಲ್ಲ.
- ಮೈತ್ರಿ ಆದ್ರೂ ಸ್ಥಾನ ಹಂಚಿಕೆಯಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಸಿಂಹಪಾಲು ಕೇಳಲಿದ್ದು, ಜೆಡಿಎಸ್ ಗೆ ಇದರಿಂದ ಲಾಭ ಕಡಿಮೆ.
- 5.ಗೆಲುವಿನ ಖುಷಿಯಲ್ಲಿರೋ ಕಾಂಗ್ರೆಸ್ ಗಿಂತ ಬಿಜೆಪಿಗೆ ಜೆಡಿಎಸ್ ಮೇಲೆ ಹೆಚ್ಚು ಒಲವಿದೆ.
- ಪ್ರತಿಪಕ್ಷಗಳ ಒಕ್ಕೂಟ ಸೇರಿದ್ರೆ ಜೆಡಿಎಸ್ ಗೆ ನಷ್ಟವೇ ಹೊರತು ಲಾಭವಿಲ್ಲ.ಕಾಂಗ್ರೆಸ್ ಹೊರತುಪಡಿಸಿ ಪ್ರತಿಪಕ್ಷ ಒಕ್ಕೂಟದ ಬೇರೆ ಯಾವ ಪಕ್ಷವೂ ಜೆಡಿಎಸ್ ಗೆ ರಾಜ್ಯದಲ್ಲಿ ಕೈ ಬಲಪಡಿಸೋದು ಕಷ್ಟ ಅನ್ನೋ ತೀರ್ಮಾನಕ್ಕೆ ಜೆಡಿಎಸ್ ಬಂದಿದೆ.