ನ್ಯೂಯಾರ್ಕ್ : ಯೋಗ ಎಂದರೆ ಏಕತೆ, ಮಾನವೀಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಮೆರಿಕದ ನ್ಯೂಯಾರ್ಕ್ನ ವಿಶ್ವಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲರಿಗೂ ನಮಸ್ಕಾರ ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಯೋಗದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು. ಇಲ್ಲಿ ಸೇರಿರುವುದಕ್ಕೆ ನಿಮಗೆಲ್ಲರಿಗೂ ಧನ್ಯವಾದ. ಯೋಗ ಎಂದರೆ ಒಗ್ಗಟ್ಟು. ನಿಮ್ಮನ್ನು ಇಲ್ಲಿ ನೋಡುತ್ತಿರುವುದಕ್ಕೆ ಸಂತೋಷ ಆಗುತ್ತಿದೆ ಎಂದು ತಿಳಿಸಿದರು.
ಅಮೆರಿಕದ ನ್ಯೂಯಾರ್ಕ್ ಒಂದು ಸುಂದರ ನಗರ. ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿದ್ದು ಸಂತಸ ತಂದಿದೆ. ಯೋಗ ಎಂದರೆ ಏಕತೆ, ಮಾನವೀಯತೆ. ಯೋಗದ ಮೂಲಕವೇ ಇಡೀ ಜಗತ್ತು ಹತ್ತಿರವಾಗುತ್ತಿದೆ. ಯೋಗ ಎಲ್ಲ ದೇಶಗಳನ್ನೂ ಒಗ್ಗೂಡಿಸುತ್ತಿದೆ. ಯೋಗ ಹಳೆಯ ಪದ್ಧತಿಯಾಗಿದ್ರೂ ಜೀವಂತವಾಗಿದೆ. ಎಲ್ಲ ಕಾಲಕ್ಕೂ ಎಲ್ಲ ವರ್ಗಕ್ಕೂ ಯೋಗ ಸಹಕಾರಿ ಎಂದು ನುಡಿದರು.
ಸಂಗೀತಗಾರ ರಿಕಿ ಕೇಜ್ ಭಾಗಿ
ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ಅವರು ವಿಶ್ವಸಂಸ್ಥೆ ಆವರಣದಲ್ಲಿ ನಡೆಯುವ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. ನಾನು ಇಲ್ಲಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ಸಾವಿರಾರು ಜನ ಇಲ್ಲಿದ್ದಾರೆ. ನಾನು ಇಂದು ಪ್ರಧಾನಿ ಮೋದಿ ಅವರನ್ನು ಹಿಂಬಾಲಿಸಿಕೊಂಡು ಯೋಗ ಮಾಡುತ್ತೇನೆ ಎಂದು ಹೇಳಿದರು.