Sunday, December 22, 2024

ಮಗಳ ಸಾಧನೆ ನೆನೆದು ಕಣ್ಣೀರಿಟ್ಟ ಪಿಎಸ್ಐ ವೆಂಕಟೇಶ್

ಮಂಡ್ಯ : ನಾನು ಸೈನ್ಯದಲ್ಲಿ ಇದ್ದೆ, ಕುಟುಂಬದ ಜೊತೆ ಇರಲಿಲ್ಲ. ಮಕ್ಕಳನ್ನು ನಾನು ಓದಿಸಲು ಆಗಲಿಲ್ಲ. ನನ್ನ ಹೆಂಡ್ತಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ ಈ ಸ್ಥಾನದ ವರೆಗೆ ತಂದಿದ್ದಾರೆ ಎಂದು ನಿರ್ಗಮಿತ ಪಿಎಸ್ಐ ವೆಂಕಟೇಶ್ ಅವರು ಕಣ್ಣೀರಿಟ್ಟರು.

ನಗರದಲ್ಲಿಂದು ಅಧಿಕಾರ ಹಸ್ತಾಂತರದ ನಂತರ ತಮ್ಮ ಕಷ್ಟದ ದಿನಗಳನ್ನು ನೆನೆದರು. ಮಗಳು ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಸ್ಥಾನಕ್ಕೆ ಬಂದಿರೋದನ್ನ ನೆನೆದು ಮಾಧ್ಯಮದವನ್ನುದ್ದೇಶಿಸಿ ಮಾತನಾಡುತ್ತ ಭಾವುಕಾರದರು.

ನನ್ನ ತಂದೆಯನ್ನು ಚಿಕ್ಕವಯಸ್ಸಿನಲ್ಲಿ ಮಿಸ್ ಮಾಡಿಕೊಂಡೆ. ತಂದೆ‌ ಸೈನ್ಯದಲ್ಲಿ ಇದ್ದರು, ನನ್ನ ತಾಯಿ ಸರ್ಕಾರಿ ಶಾಲೆಯಲ್ಲಿ ಓದಿಸಿದರು. ಅಪ್ಪ-ಅಮ್ಮನ ಕಷ್ಟಗಳನ್ನು ನೋಡಿ ನಾನು ಬೆಳೆದೆ. ಈಗ ಅಪ್ಪನ ಸ್ಥಾನಕ್ಕೆ ಬಂದಿರೋದು ಖುಷಿ ತಂದಿದೆ ಎಂದು ಪಿಎಸ್ಐ ವರ್ಷ ಅಧಿಕಾರ ಸ್ವೀಕಾರದ ಕ್ಷಣ ನೆನದು ಕಣ್ಣೀರಾದರು.

RELATED ARTICLES

Related Articles

TRENDING ARTICLES