Sunday, November 24, 2024

ಸೈನಿಕನ ಹತ್ಯೆ : 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಧಾರವಾಡ ಹೈಕೋರ್ಟ್

ಹುಬ್ಬಳ್ಳಿ-ಧಾರವಾಡ : ಕಲಘಟಗಿ ಸೈನಿಕನ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್‌ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 34 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ನಿಂಗಪ್ಪ ಯಲಿವಾಳ ಕೊಲೆಯಾದ ಸೈನಿಕ. ಇವರು ಕಲಘಟಗಿ ತಾಲೂಕಿನ ಹೊನ್ನಳ್ಳಿಯವರು. ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ ಏಳು ಜನ ಆರೋಪಿಗಳಿಗೆ ಜೀವಾವಧಿ ಕೋರ್ಟ್ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ : ಹೆಡ್​​ಕಾನ್ಸ್​​ಟೇಬಲ್ ಹತ್ಯೆ : CPI, PSI ಸೇರಿ ಮೂವರು ಪೊಲೀಸರು ಅಮಾನತು

ಸೈನಿಕ, ಆರೋಪಿಗಳ ಮಧ್ಯೆ ಆಸ್ತಿ ವ್ಯಾಜ್ಯ

ಸೈನಿಕ ನಿಂಗಪ್ಪ ಯಲಿವಾಳ ಎಂಬಾತನನ್ನು 2015ರ ಸೆಪ್ಟಂಬರ್ 20ರಂದು ಬಸವರಾಜ ಯಲಿವಾಳ ಹಾಗೂ ಇತರ ಆರು ಜನರು ಕೊಲೆಗೈದಿದ್ದರು. ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ನಿಂಗಪ್ಪ ಯಲಿವಾಳ ಹಾಗೂ ಆರೋಪಿತರ ಮಧ್ಯೆ ಆಸ್ತಿ ಕುರಿತು ವ್ಯಾಜ್ಯವಿತ್ತು. ಜಿಲ್ಲಾ ನ್ಯಾಯಾಲಯವು 2019ರ ಏಪ್ರಿಲ್ 18ರಂದು ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು.

ಸತ್ರ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಧಾರವಾಡ ಹೈಕೋರ್ಟ್‌, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ದಂಡದ ಹಣದಲ್ಲಿ ಮೃತರ ತಂದೆ, ತಾಯಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಫಿರ್ಯಾದಿ ಮೃತನ ತಂದೆ ಪರವಾಗಿ ಹಿರಿಯ ನ್ಯಾಯವಾದಿ ಎಲ್.ಎಸ್. ಸುಳ್ಳದ ಅವರು ವಾದ ಮಂಡಿಸಿದ್ದರು. ಸೈನಿಕನ ಕೊಲೆಯಲ್ಲಿ ಭಾಗಿಯಾದವರಿಗೆ ಈಗ ಜೈಲು ಫಿಕ್ಸ್ ಆಗಿದೆ.

RELATED ARTICLES

Related Articles

TRENDING ARTICLES