Saturday, November 2, 2024

ಬ್ರ್ಯಾಂಡ್ ಬೆಂಗಳೂರು ವೆಬ್ ಪೋರ್ಟಲ್ ಬಿಡುಗಡೆ ಮಾಡಿದ ಡಿಕೆಶಿ

ಬೆಂಗಳೂರು: ಬ್ರ್ಯಾಂಡ್ ಹಾಗೂ ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಸಮಿತಿ ರಚಿಸಲಾಗುವುದೆಂದು ಡಿಸಿಎಂ ಡಿಕೆಶಿ ಕಳೆದವಾರ ಹೇಳಿದ್ದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್​  ಈ ಸಂಬಂಧ ಇವತ್ತು ಮಾತನಾಡಿದ ಇವರು, ನಾನೂ ಕೂಡ ಬೆಂಗಳೂರು ನಿವಾಸಿ. ಬೆಂಗಳೂರಿನ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೇನೆ. ನಮಗಿಂತ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗುತ್ತದೆ. ಬ್ರ್ಯಾಂಡ್ ಅಂಬಾಸಿಡರ್​ಗಳನ್ನ ಕರೆದು ಮಾತಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ರೈತರಿಂದ ತ್ವರಿತಗತಿಯಲ್ಲಿ ಕೊಬ್ಬರಿ ಖರೀದಿ ಮಾಡಿ : ಜಿಲ್ಲಾಧಿಕಾರಿ ಶ್ರೀನಿವಾಸ .ಕೆ ಸೂಚನೆ

ಟ್ರಾಫಿಕ್, ಸುರಂಗ, ಕಸ, ಪಾರ್ಕ್, ಕೆರೆ, ಆಸ್ಪತ್ರೆ, ಫ್ಲೈ ಓವರ್, ಭ್ರಷ್ಟಚಾರ ವಿಚಾರವಾಗಿ ಗಮನ ಸೆಳೆದಿದ್ದಾರೆ. ಸಾರ್ವಜನಿಕರ ಅಭಿಪ್ರಾಯ ಕೂಡ ಕೇಳಬೇಕಾಗಿದೆ ಎಂದರು. ಬಿಲ್ಡರ್ಸ್, ಐಟಿ ಸೆಕ್ಟರ್ ವ್ಯಕ್ತಿಗಳನ್ನ ಆಹ್ವಾನಿಸಿದ್ದೆ, ಇಂಪಾರ್ಟೆಂಟ್ ಕಂಟ್ರಾಕ್ಟರ್ಸ್ ಇದ್ದಾರೆ, ಅಡ್ವೈಸರ್ಸ್ ಇದ್ದಾರೆ, ಎಲ್ಲರನ್ನೂ ಕರೆಯುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ದೊಡ್ಡ ದೊಡ್ಡ ಲೀಡರ್ಸ್ ಇದ್ದಾರೆ. ಅವರು ಇಲ್ಲಿಗೆ ಬರಲ್ಲ, ನಾನೇ ಅವರ ಮನೆ ಬಾಗಿಲಿಗೆ ಹೋಗ್ತೇನೆ. ಇನ್ನು ಬೊಮ್ಮಾಯಿ ಅವರಿಗೂ ಹೇಳಿದ್ದೆ, ಪಾಪ ಅವರು ಬ್ಯುಸಿ ಇದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರು ಮಾತಾಡಿದರು.

 

RELATED ARTICLES

Related Articles

TRENDING ARTICLES