ಗದಗ : ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ಶಾಲೆಗೆ ಮಳೆ ನೀರು ನುಗ್ಗಿದೆ. ಕೆಸರು ಕ್ಲೀನ್ ಮಾಡಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುಸ್ತಾಗಿದ್ದಾರೆ.
ಗದಗ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ಮಳೆರಾಯ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿದೆ. ಇದರಿಂದ ಶಾಲಾ ಮಕ್ಕಳು, ಶಿಕ್ಷಕರು, ಸಿಬ್ಬಂದಿಗಳು ಸಾಕಷ್ಟು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಳೆ ನೀರಿನೊಂದಿಗೆ ಕೆಸರು ನೋಡಿ ಶಿಕ್ಷಕರು, ಮಕ್ಕಳಿಗೆ ಶಾಕ್ ಆಗಿದೆ. ಶಾಲಾ ಕೊಠಡಿಗಳು ಸಂಪೂರ್ಣ ಕೆಸರು ಮಯವಾಗಿದ್ದವು. ಕೆಸರಲ್ಲಿ ಮಕ್ಕಳು, ಶಿಕ್ಷಕರು ಮೆಲ್ಲಗೆ ಜಾರುತ್ತಾ ಬಂದು, ಸ್ವಚ್ಛಗೊಳಿಸಲು ಹರಸಾಹಸಪಟ್ಟರು. ಸುಮಾರು ಒಂದು ಗಂಟೆ ಕಾಲ ಕೆಸರು ಕ್ಲೀನ್ ಮಾಡಿ ಸುಸ್ತಾದರು.
ಇದನ್ನೂ ಓದಿ : ರಾಜ್ಯದಲ್ಲಿ ಇಂದಿನಿಂದ 2 ದಿನ ಮಳೆಯಾಗುವ ಸಾಧ್ಯತೆ
ಅವಾಂತರ ಸೃಷ್ಟಿಸಿದ ಮಳೆರಾಯ
ಹೀಗೆ ತಗ್ಗು ಪ್ರದೇಶದ ಅನೇಕ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಗ್ರಾಮದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಇಷ್ಟು ದಿನ ಮಳೆ ಇಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದ ಜನ ಈಗ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದರಿಂದ ಇದೇನಪ್ಪಾ ಮಳೆರಾಯನ ಆರ್ಭಟ ಅಂತ ಬೇಸರ ವ್ಯಕ್ತಪಡಿಸುವಂತಾಗಿದೆ.
ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯಾದ್ಯಂತ ಇವತ್ತು ವರುಣ ಅಬ್ಬರಿಸಿದ್ದಾನೆ. ಇನ್ನೂ 5 ದಿನ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿಂದು ಬೆಳಗ್ಗಿನಿಂದಲೇ ಮಳೆರಾಯ ಅಬ್ಬರಿಸಿದ್ದು, 1 ಸೆಂ.ಮೀ.ನಷ್ಟು ಮಳೆಯಾಗಿದೆ.
4 ದಿನಗಳ ಬಳಿಕ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಅಂತ ಮುನ್ಸೂಚನೆ ನೀಡಲಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆ ಸಂಭವ ಇದೆ. ನಾಳೆಯಿಂದ ರಾಜ್ಯದ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕೆಯಾಗಿ ಜೂ.24ರಂದು ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.