Monday, December 23, 2024

ಚೇಲಾಗಿರಿ ಮಾಡಿ ಪ್ರತಾಪ್ ಸಿಂಹಗೆ ಅನುಭವವಿರಬೇಕು: ಎಂ.ಬಿ ಪಾಟೀಲ್​ 

ಬೆಂಗಳೂರು: ಪ್ರತಾಪ್ ಸಿಂಹಗೆ (Pratap Simha) ಚೇಲಾ ಕೆಲಸ ಮಾಡಿದ ಅನುಭವ ಇರಬೇಕು ಎಂದು ಎಂ.ಬಿ ಪಾಟೀಲ್ ​(MB patil) ವಾಗ್ದಾಳಿ ಮಾಡಿದ್ದಾರೆ.

ಹೌದು, ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಕೆಲಸ ಮಾಡಿ ಅಭ್ಯಾಸವಿರಬೇಕು. ಇವರು ಚೇಲಾ ಅಂತಾರೆ, ಬಿ ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು ಎಂದು ಟೀಕಿಸಿದ್ದರು.

ಸಿದ್ದರಾಮಯ್ಯರಿಗಿಂತ ನಾನು ಮುಂಚಿತವಾಗಿ ಕಾಂಗ್ರೆಸ್​ಗೆ ಬಂದಿವನು

ನಾನು ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ.ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು ಎಂದು ಸಿದ್ದರಾಮಯ್ಯ ಚೇಲಾ ಎಂ.ಬಿ.ಪಾಟೀಲ್ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ (MB Patil)​ ತಿರುಗೇಟು ನೀಡಿದ್ದಾರೆ.

ನಾನು ಪಕ್ಷದ ಚೇಲಾ, ಯಾರಿಗೂ ಚೇಲಾ ಅಲ್ಲ

ನಾನು ಪಕ್ಷದ ಚೇಲಾ, ಯಾರಿಗೂ ಚೇಲಾ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಮುಂಚೆ ನಾನು ಕಾಂಗ್ರೆಸ್​ಗೆ ಬಂದವನು. ಬಹುಶಃ ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು.

ಬಿ.ಎಲ್ ಸಂತೋಷ್ ಬುಟ್ಟಿಯಲ್ಲಿ ಇಂತಹ ಚೇಳುಗಳೇ ಬಹಳ ಇರಬೇಕು

ಸಂಸದ ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ಇವರು ಚೇಲಾ ಅಂತಾರೆ, ಬಿ.ಎಲ್ ಸಂತೋಷ್  ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡುತ್ತಾರೆ ಅನಿಸುತ್ತದೆ.

ಪ್ರತಾಪ್ ಸಿಂಹ ಇದೆಲ್ಲಾ ಬಿಟ್ಟು ಅಕ್ಕಿ ಕೊಡಿಸುವ ಕೆಲಸ ಮಾಡಿ

ಪ್ರತಾಪ್ ಸಿಂಹ ಇನಿಷಿಯೇಟಿವ್​ ತೆಗೆದುಕೊಂಡು ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದರು. ಇದನ್ನೆಲ್ಲ ನಿಲ್ಲಿಸಿ ಎಂದು ತೀರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES