Monday, December 23, 2024

ಮೋದಿ ಅವರನ್ನ ಬೈದ್ರೆ, ಆಕಾಶಕ್ಕೆ ಉಗುಳಿದಂತೆ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಅಕ್ಕಿ ಬೇಕಿದ್ರೆ ಹೋಗಿ ಕೇಳಿ ಸಿದ್ದರಾಮಯ್ಯ. ಮೋದಿ ಅವರನ್ನ ಬೈದ್ರೆ, ಆಕಾಶಕ್ಕೆ ಉಗುಳಿದಂತೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ನಡೆ ವಿರುದ್ಧ ನಾವು ಪ್ರತಿಭಟನೆ ಮಾಡ್ತೀವಿ. ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾತು ಎತ್ತಿದ್ರೆ ಬಡವರು ಅಂತೀರಿ. ಬಡವರನ್ನೇ ಬಂಡವಾಳ ವಾಗಿ ಮಾಡಿಕೊಂಡಿದ್ದೀರಿ. ಇವಾಗ ಬಡವರಿಗೆ ಶಾಕ್ ಕೊಡ್ತಿದ್ದೀರಿ. ಬಸ್ಸುಗಳು ಕೆಲವೇ ದಿನಗಳಲ್ಲೇ ನಿಂತು ಹೋಗುತ್ತದೆ. ಕರೆಂಟ್ ಕೈ ಕೊಟ್ಟು ಕೈಗಾರಿಕೆಗಳು ನಿಂತು ಹೋಗುತ್ತದೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಬಿಲ್ ಗಳನ್ನು ಎಲ್ಲವನ್ನೂ ನಿಲ್ಲಿಸಿದ್ದೀರಿ ಎಂದು ಫುಲ್ ಗರಂ ಆಗಿದ್ದಾರೆ.

ಈಗಾಗಲೇ ದಂಧೆ ಶುರುವಾಗಿದೆ

ವರ್ಗಾವಣೆಯಲ್ಲಿ ಈಗಾಗಲೇ ದಂಧೆ ಶುರುವಾಗಿದೆ. ಐಎಎಸ್, ಐಪಿಎಸ್ ಸ್ಥಳಗಳನ್ನು ಮಾರಾಟಕ್ಕೆ ಇಟ್ಟಿದ್ದೀರಿ. ಇದು ಒಂದು ಬಡವರ, ಜನ ವಿರೋಧಿ ಸರ್ಕಾರ. ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಹಾಕೋಕೆ ಹೊರಟಿದ್ದೀರಿ. ಇದರ ಬಗ್ಗೆ ಪ್ರತಿಭಟನೆ ಮಾಡಿದ್ರೆ ನಮ್ಮನ್ನು ಅರೆಸ್ಟ್ ಮಾಡ್ತೀರಿ. ಏನಾದರೂ ತಪ್ಪು ಮಾಡಿದ್ರೆ ಅವರನ್ನು ನೇಣಿಗೆ ಹಾಕಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ಗೆ ದೇಶವನ್ನು ಛಿದ್ರ ಛಿದ್ರ ಮಾಡೋದು ಇಷ್ಟವಾಗಿದೆ : ಭಗವಂತ ಖುಬಾ

ಇದೊಂದು ಸುಳ್ಳಮಳ್ಳ ಸರ್ಕಾರ

ಇವತ್ತು ಪೊಲೀಸ್ ರಾಜ್ಯ ನಡೆಯುತ್ತಿದೆ. ಮಾಧ್ಯಮಗಳ ಜೊತೆ ಮಾತಾಡುವಾಗ ಅರೆಸ್ಟ್ ಮಾಡ್ತೀರಾ? ನಮ್ಮ ಪ್ರತಿಭಟನೆಯನ್ನು ಧಮನ, ಹತ್ತಿಕ್ಕುವ ಪ್ರಯತ್ನ ಇದು. ಇದೆ ರೀತಿ ಮುಂದುವರಿದ್ರೆ ನಾವು ಅದಕ್ಕೆ ಬಗ್ಗುವುದಿಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ಕೈಯಲ್ಲಿ ಶಕ್ತಿ ಇದೆಯೋ ತೋರಿಸ್ತೀವಿ ಮುಂದಿನ ದಿನಗಳಲ್ಲಿ. ಇದೊಂದು ಸುಳ್ಳ-ಮಳ್ಳ ಸರ್ಕಾರ ಎಂದು ಛೇಡಿಸಿದ್ದಾರೆ.

1 ಕಿಲೋ ಅಕ್ಕಿ ಕೊಡೋಕೆ ಆಗ್ತಿಲ್ಲ

ಸುಳ್ಳು ಹೇಳುವುದು ಮಳ್ಳನ‌ ತರ ಮೋಸ ಮಾಡುವುದು. ಇವ್ರು ಏನು ಹೇಳಿದ್ರು, ನಾವು 10 ಕಿಲೋ ಅಕ್ಕಿ ಕೊಡ್ತೀವಿ ಅಂತ. ಆದರೆ, ಇವ್ರಿಂದ ಒಂದು ಕಿಲೋ ಅಕ್ಕಿ ಕೂಡ ಕೊಡೋಕೆ ಆಗಿಲ್ಲ. ಇವಾಗ 5 ಕಿಲೋ ಅಕ್ಕಿ ಕೊಡ್ತಿರೋದು ಕೇಂದ್ರ ಸರ್ಕಾರದಿಂದ. ಸುಳ್ಳು ಹೇಳೋ ಕಾಂಗ್ರೆಸ್ ನಿಂದ ನಾವು ಪಾಠ ಕೇಳುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES