ಬೆಂಗಳೂರು: ರಾಜ್ಯಸರ್ಕಾರದ ವಿರುದ್ದಅಕ್ಕಿ ವಿಚಾರವಾಗಿ, ವಿದ್ಯುತ್ ದರ ಏರಿಕೆಗಾಗಿ ಆರೋಪ – ಪ್ರತ್ಯಾರೋಪ ನಡೆಸಿದ್ದ ಬಿಜೆಪಿ ನಾಯಕರಿಗೆ, ಇದೀಗ ಪೂರ್ಣಾವಧಿ ಸಿಎಂ ವಿಚಾರ ಕೂಡ ಅಸ್ತ್ರದಂತೆ ಸಿಕ್ಕಿದೆ.
ಹೌದು, ಪೂರ್ಣಾವಧಿ ಸಿಎಂ ವಿಚಾರವಾಗಿ ಮಾತಬನಾಡಿದ ಆರ್ ಅಶೋಕ್ ಅಣ್ಣ ಸಿಎಂ ಆಗಲ್ಲ ಅಂತಾ ಡಿ.ಕೆ.ಸುರೇಶ್ ಕಣ್ಣೀರಿಡುತ್ತಿದ್ರೆ, ಸಿದ್ದರಾಮಯ್ಯ 5 ವರ್ಷಗಳ ಕಾಲ ಮುಖ್ಯಮಂತ್ರಿ ಅಷ್ಟೇ ಅಲ್ಲ. ಇನ್ನೂ 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ರಾಜಣ್ಣ ಹೇಳಿದ್ದಾರೆ. ಪಾಪ ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲಿಗೆ ಹೋಗಬೇಕು ಎಂದು ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ನಾನೇ ಪೂರ್ಣಾವಧಿ ಸಿಎಂ ಎಂದು ಹೇಳಲಿ
ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ನಾನೇ ಪೂರ್ಣಾವಧಿ ಸಿಎಂ ಎಂದು ಹೇಳಲಿ ಅಂತಾ ಬಿಜೆಪಿ ನಾಯಕ ಆರ್. ಅಶೋಕ್ ಸವಾಲೆಸೆದಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಅಧಿಕಾರ ಹಂಚಿಕೆ ಸೂತ್ರವೇನು? ಒಪ್ಪಂದ ಏನು ಅನ್ನೋದನ್ನ ರಾಜ್ಯದ ಜನರ ಮುಂದಿಡಿ ಅಂತಾ ಅಶೋಕ್ ಆಗ್ರಹಿಸಿದ್ದಾರೆ.
ಹಿಂದೂ ವಿರೋಧಿ ಯಾರಾದ್ರೂ ಇದ್ದರೆ ಅದು ಕಾಂಗ್ರೆಸ್ಸಿಗರು
ಉಚಿತ ಬಸ್ನಿಂದಲೇ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಇದು ಹಿಂದುತ್ವ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್ ಯಾರಾದ್ರೂ ಹಿಂದೂ ವಿರೋಧಿ ಇದ್ದರೆ ಅದು ಕಾಂಗ್ರೆಸ್ಸಿಗರು. ಟಿಪ್ಪು ಜಯಂತಿ ಮಾಡಿದವರು ಹಿಂದೂ ಪರ ಆಗುತ್ತಾರಾ? ಹೀಗಿರುವಾಗ ಹಿಂದೂ ಪರ ಕಾಂಗ್ರೆಸ್ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಮಹದೇವಪ್ಪ ಅವರನ್ನು ಸಿಎಂ ವಿಚಾರವಾಗಿ ಕೇಳಿದರೆ, ಮಹದೇವಪ್ಪನ ಬಳಿಯಲ್ಲೇ ಕೇಳಿ ಎನ್ನುತ್ತಿದ್ದಾರೆ. ಇತ್ತ ಡಿ. ಕೆ. ಶಿವಕುಮಾರ್ ಕೂಡಾ ಪೂರ್ಣಾವಧಿ ಸಿಎಂ ವಿಚಾರದ ಬಗ್ಗೆ ಮಾತನ್ನೇ ಆಡುತ್ತಿಲ್ಲ. ಆದರೆ, ಸಚಿವರ ಹೇಳಿಕೆಗಳನ್ನ ಗಮನಿಸಿದರೆ ಒಳಗೊಳಗೇ ಸಿಎಂ ಗುದ್ದಾಟ ನಡೆಯುತ್ತಿರಬಹುದು ಅನ್ನೋ ಅನುಮಾನ ಬರೋದಂತೂ ಸತ್ಯ..