Monday, December 23, 2024

ಸಿಎಂ ಬದಲಾವಣೆ ಹೈಕಮಾಂಡ್​ಗೆ ಬಿಟ್ಟಿದ್ದು : ಸಚಿವ ಹೆಚ್​ಕೆ ಪಾಟೀಲ್

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ವಿಷಯ ವರಿಷ್ಠರಿಗೆ ಬಿಟ್ಟಿದ್ದು.ಅನಗತ್ಯವಾಗಿ ವಿವಾದ ಸೃಷ್ಟಿಸಿ ಸಮಯ ಹಾಳು ಮಾಡಬೇಡಿ ಎಂದು ಕಾನೂನು ಸಚಿವ ಹೆಚ್​.ಕೆ.ಪಾಟೀಲ್ ಹೇಳಿದರು.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್​.ಕೆ.ಪಾಟೀಲ್, ಸಿಎಂ ಜತೆ ಎಲ್ಲರೂ ವಿಶ್ವಾಸದಿಂದ ಇದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪರ್ಕದಲ್ಲೂ ಇದ್ದೇನೆ. ಪಕ್ಷದ ವಿಷಯವಾಗಿ ಹೈಕಮಾಂಡ್ ಸಂಪರ್ಕದಲ್ಲೂ ಇದ್ದೇನೆ. ಸಿಎಂ ಬದಲಾವಣೆ ಹೈಕಮಾಂಡ್​ಗೆ ಬಿಟ್ಟ ವಿಚಾರ ಇದರ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲತನ, ಉದಾರ ಮನಸ್ಸು ಇಲ್ಲ : ಪ್ರತಾಪ್ ಸಿಂಹ

ಇನ್ನು ಡಿಸಿಎಂ ಡಿಕೆ ಬಗ್ಗೆ ಸಿಎಂ ಅಸಮಾಧಾನ ಎಂಬ ವದಂತಿ ವಿಚಾರವಾಗಿ ಮಾತನಾಡಿದ ಇವರು ಇದೆಲ್ಲ ಸುಳ್ಳು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸೃಷ್ಟಿಸಿದ್ದಾರೆ. ಜನರ ಗಮನ ಬೇರೆಡೆ ತಿರುಗಿಸಲು  ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES