Monday, December 23, 2024

ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಿಲ್ಲ : ಬಿ.ವೈ ವಿಜಯೇಂದ್ರ

ಬೆಂಗಳೂರು : ರಾಜ್ಯದಲ್ಲಿ ತಲೆದೂಗಿರುವ ಕುಡಿಯುವ ನೀರಿನ ಅಭಾವ ವಿಚಾರ ಕುರಿತು ರಾಜ್ಯ ಸರ್ಕಾರದ ವಿರುದ್ಧ ಶಿಕಾರಿಪುರ ಬಿಜೆಪಿ ಶಾಸಕ ಬಿ‌.ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿಜಯೇಂದ್ರ, ಉಚಿತ ಗ್ಯಾರಂಟಿ ಕಸರತ್ತಿನಲ್ಲಿ ಕಳೆದು ಹೋಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ ಎಂದು ಕುಟುಕಿದ್ದಾರೆ.

ವರುಣನ ಅವಕೃಪೆ ಇಡೀ ರಾಜ್ಯವನ್ನು ಆವರಿಸಿದೆ. ಬರಗಾಲ ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿದೆ. ನೀರಿಲ್ಲದೆ ತತ್ತರದಿಂದ ಮಹಿಳೆಯರು ಆಕ್ರೋಶಿತರಾಗಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ, ಉದ್ಭವಿಸುವ ಭೀಕರತೆಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ.. ಇಂಥವರನ್ನು ಹಿಂದೆ ನೋಡಿರಲಿಲ್ಲ : ಕೆ.ಎಸ್ ಈಶ್ವರಪ್ಪ

ಉಚಿತ ಗ್ಯಾರಂಟಿ ಭ್ರಮೆ

ನೀರಿನ ಸಮಸ್ಯೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಬರಗಾಲ ಇದೆ. 500 ಹಳ್ಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿ ಸುಮ್ಮನಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬರಗಾಲ ಇದ್ದ ಕಡೆ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು. ಉಚಿತ ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದ್ರೆ ಸರ್ಕಾರದ ಜನ ಪ್ರೀಯತೆ ಬಹಳ ದಿನ ಉಳಿಯಲ್ಲ. ನೀರು ಕೊಡದ ಸರ್ಕಾರ ತೆಗೆದುಕೊಂಡು ಏನು‌ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES