Sunday, December 22, 2024

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಕಾದು ನೋಡಿ : ಬಿ.ವೈ ವಿಜಯೇಂದ್ರ

ಶಿವಮೊಗ್ಗ : ಇದು ಡಬಲ್ ಸ್ಟೇರಿಂಗ್ ಸರ್ಕಾರ. ಲೋಕಸಭೆ ಚುನಾವಣೆ ಆಗಲಿ. ಬಿಜೆಪಿ 25 ಸ್ಥಾನ ಪಡೆದ ನಂತರ ಅವರ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಿ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಕುಟುಕಿದ್ದಾರೆ.

ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂಬ ಸಚಿವ ಮಹದೇವಪ್ಪ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನವರು ತಮ್ಮ ಭರವಸೆಯಲ್ಲಿ ಎಲ್ಲರಿಗೂ 10 ಕಿಲೋ ಅಕ್ಕಿ ಕೊಡ್ತೀವಿ ಅಂದಿದ್ರು. ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ 5 ಕಿಲೋ ಅಕ್ಕಿ ಕೊಡ್ತಿದ್ದಾರೆ. ನೀವು ಭರವಸೆ ಕೊಟ್ಟಿದ್ದು 10 ಕಿಲೋ ಅಕ್ಕಿ. ನಿಮ್ಮ ಭರವಸೆಯಂತೆ 15 ಕಿಲೋ ಅಕ್ಕಿ ಕೊಡಬೇಕು. ನೀವು ಕೊಟ್ಟ ಭರವಸೆ ನೀವು ಈಡೇರಿಸಿ ಎಂದು ಹೇಳಿದ್ದಾರೆ.

ತಪ್ಪು ಕಲ್ಪನೆ ಮೂಡಿಸುವಲ್ಲಿ ನಿಸ್ಸೀಮರು

ನಮ್ಮ ರಾಜ್ಯದಲ್ಲೇ ರೈತರು ಸಾಕಷ್ಟು ಅಕ್ಕಿ, ಗೋಧಿ, ರಾಗಿ ಬೆಳೆಯುತ್ತಾರೆ. ಕಾಂಗ್ರೆಸ್ ನಾಯಕರಿಗೆ ಬೇರೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿ. ನಮ್ಮ ರಾಜ್ಯದಲ್ಲಿ ಬೆಳೆಯುವ ಅಕ್ಕಿ ಸಿಗಲಿಲ್ಲ ಅಂದ್ರೆ ಬೇರೆ ರಾಜ್ಯದಿಂದ ತೆಗೆದುಕೊಂಡು ಬನ್ನಿ. ಕಾಂಗ್ರೆಸ್ ನವರು ರಾಜ್ಯದ ಜನರಿಗೆ ತಪ್ಪು ಕಲ್ಪನೆ ಕೊಡುವುದರಲ್ಲಿ ನಿಸ್ಸೀಮರು. ಹೀಗಾಗಿಯೇ ಅಧಿಕಾರಕ್ಕೆ ಬಂದಿದ್ದಾರೆ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಸುರ್ಜೇವಾಲ ಎಟಿಎಂ ಸರ್ಕಾರದ ಏಜೆಂಟ್ : ಎನ್. ರವಿಕುಮಾರ್

ತಪ್ಪು ಮಾಡಿದ್ದರೆ ಜೈಲಿಗೆ ಕಳುಹಿಸಿ

ಬಿಜೆಪಿ ಸರ್ಕಾರದ ಹಗರಣ ತನಿಖೆ ಮಾಡ್ತೀವಿ ಅಂತಾ ಸಚಿವರು ಹೇಳ್ತಿದ್ದಾರೆ. ನೀವು ಯಾವುದೇ ತನಿಖೆ ನಡೆಸಿ. ತಪ್ಪು ಮಾಡಿದ್ದರೆ ಜೈಲಿಗೆ ಕಳುಹಿಸಿ. ಮೊದಲು ರಾಜ್ಯದಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಇದೆ, ಅದನ್ನು ಬಗೆಹರಿಸಿ. ಅತಿ ಶೀಘ್ರದಲ್ಲಿ ಕೊಟ್ಟಂತಹ ಭರವಸೆ ಈಡೇರಿಸಬೇಕು ಎಂದು ತಿಳಿಸಿದ್ದಾರೆ.

ಪ್ರತಾಪ್ ಸಿಂಹ ಸೋಲಿಲ್ಲದ ಸರದಾರ

ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ವಿಚಾರ ಕುರಿತು ಮಾತನಾಡಿ, ಅನೇಕ ಹಿರಿಯರು ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಈ ಬಗ್ಗೆ ಉಪದೇಶ ಮಾಡುವಷ್ಟು ದೊಡ್ಡವನಲ್ಲ. ಪ್ರತಾಪ್ ಸಿಂಹ ಸೋಲಿಲ್ಲದ ಸರದಾರರು, ವಾಗ್ಮಿಗಳು. ನನ್ನನ್ನು ಸೇರಿದಂತೆ ನಮ್ಮ‌ ನಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

RELATED ARTICLES

Related Articles

TRENDING ARTICLES