ಬೆಂಗಳೂರು : ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅನ್ನೋ ಮಾತಿದೆ. ಕೋಶ ಓದೋಕೆ ಮನೆಯಲ್ಲಿ ಗಂಡಂದಿರು ಬಿಡಲ್ಲ. ಆದ್ರೆ, ರಾಜ್ಯ ಸುತ್ತೋಕೆ ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರೈಟ್ ರೈಟ್..!
ಹೌದು, ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿದ ಬಳಿಕ ಇದೇ ಆಗಿರೋದು. ವೀಕೆಂಡ್ ಬಂತು ಅಂತ ಮಹಿಳೆಯರು ಬಸ್ ಏರಿ ಟ್ರಿಪ್ ಹೊರಟಿದ್ದಾರೆ. ಗಂಡಸ್ರು ಮುಖ, ಮುಖ ನೋಡ್ಕೊಂಡು ಕೂರುವಂತಾಗಿದೆ.
ಈ ಬಗ್ಗೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಸರ್ ನನ್ನ ಹೆಂಡ್ತಿ ಎರಡು ಸೀರೆ ತೆಗೆದುಕೊಂಡು ರಾತ್ರಿ ಹೋಗಿ ಬೆಳಗ್ಗೆ ಬರ್ತೀನಿ ಅಂತಾ ಹೇಳಿದ್ಲು. ಈಗ ಗಂಡಸರು ಎಲ್ಲಿ ಹೋಗಿ ಹುಡುಕಿಕೊಂಡು ಹೋಗೋದು ಅಂತಾ ಹೇಳಿದ್ದಾರೆ.
ಉಚಿತ ಬಸ್ ಸೌಲಭ್ಯ ನೀಡಿದಾಗಿನಿಂದ ಮನೆಯಲ್ಲಿ ಹೆಂಗಸರು ಅಡುಗೆ ಮಾಡುತ್ತಿಲ್ಲ. ಧರ್ಮಸ್ಥಳಕ್ಕೆ ಹೋದ ನನ್ನ ಹೆಂಡ್ತಿ ಇನ್ನೂ ಬಂದೇ ಇಲ್ಲ. ಭಾನುವಾರ ಬಂದ್ರೆ ಬಸ್ ಹತ್ತಿ ಹೋಗ್ತೀನಿ ಅಂತಾ ಮಹಿಳೆಯರು ಹೇಳುತ್ತಿದ್ದಾರೆ. ನಾವು ಅವರ ಮುಖ, ಮುಖ ನೋಡಿಕೊಂಡು ಇರಬೇಕಾ? ಗಂಡಸರು ಏನು ಅನ್ಯಾಯ ಮಾಡಿದ್ರು ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ : ಕೊಡಗಿನ ಬೆಡಗು ಸವಿಯೋರಿಗೆ ಥ್ರಿಲ್ ನೀಡುತ್ತೆ ಈ ಗ್ಲಾಸ್ ಸ್ಕೈವಾಕ್
ನಾವು ಏನು ದ್ರೋಹ ಮಾಡಿದ್ವಿ
ಇನ್ನೂ ಕೆಲವು ಪ್ರಯಾಣಿಕರು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಗಂಡಸ್ರು ಯಾರು ವೋಟ್ ಹಾಕಿಲ್ವಾ? ಹೆಂಗಸ್ರು ಮಾತ್ರ ವೋಟ್ ಹಾಕಿದ್ರಾ? ಅದಕ್ಕೆ ಫ್ರೀ ಬಸ್ ಕೊಟ್ರಾ? ನಾವು ಬಸ್ ಹತ್ತೋಕೆ ಆಗ್ತಿಲ್ಲ. ನಾವು ಏನು ದ್ರೋಹ ಮಾಡಿದ್ವಿ. ನೆಕ್ಟ್ ಎಲೆಕ್ಷನ್ ಬರುತ್ತೆ. ಆಗ ಬನ್ನಿ, ನೋಡಿಕೊಳ್ತೀವಿ ಅಂತಾ ಬೇಸರಿಸಿದ್ದಾರೆ.
ವೀಕೆಂಡ್ ಹಿನ್ನೆಲೆಯಲ್ಲಿ ಇಂದು ಮಹಿಳೆಯರು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮಂಗಳೂರು, ಶೃಂಗೇರಿ, ಹೊರನಾಡು, ಮಂಗಳೂರು, ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದಾರೆ. ಮಹಿಳಾ ಪ್ರಯಾಣಿಕರ ಓಡಾಟದಿಂದ ಬಸ್‌ಗಳು ಫುಲ್ ರಶ್ ಆಗಿದ್ದ ದೃಶ್ಯ ಕಂಡುಬಂದಿತು.