Wednesday, January 22, 2025

ನಿಜ ಹಿಂದೂಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಶಕ್ತಿ ಯೋಜನೆ ಯಶಸ್ಸಿನ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ‘ಶಕ್ತಿ’ ಹಿಂದುತ್ವಕ್ಕೆ ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡುವ ಜೊತೆ ಜೊತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ಹಿಂದೂ ದೇಗುಲಗಳು, ಪುಣ್ಯಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರ ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್ ಸದಾ ಬದ್ಧ ಎಂದು ಹೇಳಿದ್ದಾರೆ.

ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡುವ ಜೊತೆಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು  ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ನನ್ನ ಹೆಂಡ್ತಿ, ಎರಡು ಸೀರೆ ತಗೊಂಡು ರಾತ್ರಿ ಹೋಗಿ ಬೆಳಗ್ಗೆ ಬರ್ತೀನಿ ಅಂದ್ಲು, ಇನ್ನೂ ಬಂದೇ ಇಲ್ಲ!

ನೌಕರರ ಮೂಕವೇದನೆ ಕೇಳುವುದಿಲ್ಲವೇ?

ಇನ್ನೂ ಕೆಎಸ್ಸಾರ್ಟಿಸಿ ಬಸ್ ಡೋರ್ ಮುರಿದ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ತಯಾರಿ ಇಲ್ಲದೆ ಯೋಜನೆಗಳು ಜಾರಿ ಮಾಡಿರುವ ಪರಿಣಾಮ ಇದು. ಸಾರಿಗೆ ನೌಕರರ ಮೂಕವೇದನೆ ಸರ್ಕಾರಕ್ಕೆ ಕೇಳುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿರುವುದು ನಿಮ್ಮ ಭರವಸೆಗಳಲ್ಲಿ ಒಂದಾಗಬಹುದು. ರಾಜ್ಯದ  ನಿಗಮಗಳ ಪರಿಸ್ಥಿತಿ ಹಾಗೂ ಸಾರಿಗೆ ನೌಕರರ ಸ್ಥಿತಿಯ ಬಗ್ಗೆ ಸರ್ಕಾರದಲ್ಲಿ ಯೋಚಿಸುವವರು ಇದ್ದಾರಾ? ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES