Wednesday, January 22, 2025

ಸುರ್ಜೇವಾಲ ಎಟಿಎಂ ಸರ್ಕಾರದ ಏಜೆಂಟ್ : ಎನ್. ರವಿಕುಮಾರ್

ಬೆಂಗಳೂರು : ಎಐಸಿಸಿಗೆ ಕರ್ನಾಟಕದಲ್ಲಿ ಎಟಿಎಂ ಸರ್ಕಾರ ತೆರೆಯಲಾಗಿದೆ. ಇದೊಂದು ಎಟಿಎಂ ಸರ್ಕಾರ. ರಾಜ್ಯ ಉಸ್ತುವಾರಿ ಸುರ್ಜೇವಾಲ ಅದರ ಏಜೆಂಟ್ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕುಟುಕಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪ್ರತಿಭಟನೆ ಇದೊಂದು ಹಾಸ್ಯಾಸ್ಪದ ನಿರ್ಧಾರ ಅನಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ದೇಶಾದ್ಯಂತ ಬಡ ಜನರಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ. ಹೆಚ್ಚುವರಿ ಅಕ್ಕಿ ಕೊಡುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿ. ಕೇಂದ್ರದ ಬಳಿ ಅಕ್ಕಿ ಇಲ್ಲ, ಹಾಗಾಗಿ ಕೊಡಲು ಆಗುತ್ತಿಲ್ಲ. ಆದರೆ, ಜೂನ್ 20ರಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಧರಣಿ ಮಾಡುತ್ತಿರುವುದು ಜನವಿರೋಧಿ ನಿರ್ಧಾರ. ಕೇಂದ್ರದ ಬಳಿ‌ ಅಕ್ಕಿ ಇದ್ದರೆ ತಾನೇ ಕೊಡೋದು? ಎಂದು ಪ್ರಶ್ನಿಸಿದ್ದಾರೆ.

ಅಕ್ಕಿ ಖರೀದಿ ಮೂಲಕ ಕಮಿಷನ್

ಇದು ಮಳೆಗಾಲ. ಅಕ್ಕಿ ಸ್ಟಾಕ್ ಇಲ್ಲ. ಇವರಿಗೆ ಅಕ್ಕಿ ಕೊಟ್ಟು ಬಿಟ್ಟರೆ ಉಳಿದ ರಾಜ್ಯಗಳಿಗೆ ಏನು ಕೊಡೋದು ಅನ್ನೋ ಪ್ರಶ್ನೆ ಕೇಂದ್ರದ್ದು. ಛತ್ತೀಸ್‌ಗಡದಲ್ಲಿ ಅಕ್ಕಿ ಖರೀದಿ ಮೂಲಕ ಕಮಿಷನ್ ಮಾಡಲು ಈ ಸರ್ಕಾರ ಹೊರಟಿದೆ. ಛತ್ತೀಸ್‌ಗಡ ಅಕ್ಕಿಯ ಮೂಲಕ ತಮ್ಮ ಜೇಬಿಗೆ ಹಣ ಹಾಕಿಕೊಳ್ಳುವ ಕೆಲಸ ಈ ಸರ್ಕಾರ ಮಾಡ್ತಿದೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯವರನ್ನ ಕೇಳಿಕೊಂಡು ನಾವು ಆಡಳಿತ ಮಾಡಬೇಕೇ? : ಡಾ.ಜಿ ಪರಮೇಶ್ವರ್

ಜೂ.22 ರಿಂದ 26ರವರೆಗೆ ರಾಜ್ಯ ಪ್ರವಾಸ

ಜೂನ್ 22 ರಿಂದ 26 ರವರೆಗೆ ಪಕ್ಷದ ವಿವಿಧ ನಾಯಕರಿಂದ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿಯವರು ಪ್ರಧಾನಿಯಾಗಿ ಒಂಭತ್ತು ವರ್ಷ ಹಿನ್ನೆಲೆ 7 ತಂಡಗಳಲ್ಲಿ ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ ನಡೆಯಲಿದೆ. ಕೇಂದ್ರದ ಒಂಭತ್ತು ವರ್ಷಗಳ ಸಾಧನೆಗಳನ್ನು ಜನರಿಗೆ ತಲುಪಿಸಲು ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

50 ಲಕ್ಷ ಮನೆಗಳಿಗೆ ಕರಪತ್ರಗಳ ವಿತರಣೆ

ಜೂನ್ 26 ರಿಂದ ಜುಲೈ 5 ರವರೆಗೆ ರಾಜ್ಯಾದ್ಯಂತ ಕರಪತ್ರಗಳ ವಿತರಣೆ ಅಭಿಯಾನ ನಡೆಯಲಿದೆ. ಎಲ್ಲ ಮನೆ ಮನೆಗಳಿಗೆ ಕೇಂದ್ರದ ಸಾಧನೆಗಳಿರುವ ಕರಪತ್ರಗಳ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಮನೆ ಮನೆಗೆ ಮೋದಿ ಹೆಸರಲ್ಲಿ ಕರಪತ್ರ ವಿತರಣೆ ಮಾಡಲಾಗುತ್ತದೆ. 50 ಲಕ್ಷ ಮನೆಗಳಿಗೆ ಕರಪತ್ರಗಳ ವಿತರಣೆ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES