Monday, December 23, 2024

ಮೊನ್ನೆ ಕಾರ್ಯಕ್ರಮದಲ್ಲಿ ಡಿಕೆಶಿ ನಿಮಗೆ ಅಲ್ವಾ, ‘Dont Disturb’ ಅಂದಿದ್ದು : ಶಾಸಕ ಯತ್ನಾಳ್

ವಿಜಯಪುರ : ಬಿಜೆಪಿ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದೆ ಎಂದು ಟ್ವೀಟ್ ಮಾಡಿರುವ ಸಚಿವ ಎಂ.ಬಿ ಪಾಟೀಲ್ ಅವರಿಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಹಾ! ಮೊನ್ನೆ ನಿಮ್ಮ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಿಮಗೆ ಅಲ್ವಾ ,”Dont Disturb” ಅಂದಿದ್ದು ಎಂದು ಕುಟುಕಿದ್ದಾರೆ.

ಎಂ.ಬಿ ಪಾಟೀಲ್ ಅವರೇ, ನಾನೇನು ಜಲಸಂಪನ್ಮೂಲ ಸಚಿವ ಆಗೋಕ್ಕೆ ದೆಹಲಿ ಲಾಬಿ ಮಾಡಿಲ್ಲ ಬಿಡಿ. ವಾಜಪೇಯಿಯವರ ಕಾಲದಲ್ಲಿ ಮಂತ್ರಿಯಾಗಿರುವ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೂ ಇದೆ, ಅನಿಸಿಕೆ ಅಭಿಪ್ರಾಯ ಹೇಳೋಕ್ಕೆ, ಯಾರು ‘Dont Disturb, Im speaking something important here’ ಅಂತ ಗದರುವುದಿಲ್ಲ ಬಿಡಿ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಇಂಥ 100 ಡಿಕೆಶಿಗಳು ಬಂದ್ರು ಏನು ಮಾಡೋಕಾಗಲ್ಲ : ಶಾಸಕ ಯತ್ನಾಳ್

ನಿಮ್ಮ ಬಗ್ಗೆ ನನಗೆ ಅಯ್ಯೋ ಅನ್ನಿಸುತ್ತಿದೆ

ಎಂ.ಬಿ ಪಾಟೀಲ್ ರೇ.. ನಿಮ್ಮ ಬಗ್ಗೆ ನನಗೆ ಅಯ್ಯೋ ಅನ್ನಿಸುತ್ತಿದೆ. ನಿಮ್ಮಲ್ಲಿ ಇರುವ ರೀತಿ ಎಲ್ಲಾ ಪಕ್ಷದಲ್ಲಿರುತ್ತದೆ ಎಂದು ಭಾವಿಸಬೇಡಿ. ದಲಿತ ನಾಯಕರಾದ ಡಾ.ಜಿ ಪರಮೇಶ್ವರ್ ಅವರನ್ನು ಮುಗಿಸಲು ಸಿದ್ದರಾಮಯ್ಯನವರು ಯಾರ ಹೆಗಲ ಮೇಲೆ ಇಟ್ಟು ಗುಂಡು ಹೊಡೆದರು? ಎಂದು ಎಂ.ಬಿ ಪಾಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟಿದ್ದು ಯಾರು?

ನಿಮಗೆ ‘ಭಾರಿ ಸಂಪನ್ಮೂಲ’ ಜಲಸಂಪನ್ಮೂಲ ಇಲಾಖೆ ಸಿಗಲಿಲ್ಲ ಅನ್ನುವ ಕಾರಣಕ್ಕೆ ಡಿ.ಕೆ ಶಿವಕುಮಾರ್ ಅವರ ವಿರುದ್ಧ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟಿರುವುದು ಯಾರು? ಮೊನ್ನೆ ನಿಮ್ಮ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಿಮಗೆ ಅಲ್ವಾ, ‘Dont Disturb’ ಅಂದಿದ್ದು. ನಿಮ್ಮಂತಹ ಹಿರಿಯ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷ ಹೀಗೆ ನಡೆಸಿಕೊಳ್ಳಬಾರದಿತ್ತು ಬಿಡಿ ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES