Sunday, April 28, 2024

ಜನರಿಗೆ ಹೊರೆಯಾಗದಂತೆ ಗ್ಯಾರಂಟಿ ಜಾರಿ ಮಾಡಿ : ಸೀಕಲ್ ರಾಮಚಂದ್ರಗೌಡ

ಚಿಕ್ಕಬಳ್ಳಾಪುರು : ರಾಜ್ಯ ಸರ್ಕಾರ ಜನರಿಗೆ ಹೊರೆಯಾಗದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಸೀಕಲ್ ರಾಮಚಂದ್ರಗೌಡ ಹೇಳಿದ್ದಾರೆ.

ಶಿಡ್ಲಘಟ್ಟದ ಸೇವಾ ಸೌಧದಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಐದು ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಸಂಕಲ್ಪ ಸೇವಾ ಯೋಜನೆಯನ್ನು ಜಾರಿಗೊಳಿಸಿ ಅವರು ಮಾತನಾಡಿದ್ದಾರೆ.

ಐದು ಉಚಿತ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿದ್ದೇವೆ. ನಮ್ಮ ಜನಕ್ಕೆ ಒಳ್ಳೆಯದಾಗಿ, ಸಂತೋಷದಿಂದ ಬದುಕಬೇಕು. ಅದಕ್ಕೆ ನಮ್ಮ ಅಳಿಲು ಸೇವೆ ಮಾಡಲು ಪಣತೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಐದು ಉಚಿತ ಗ್ಯಾರಂಟಿಗಳನ್ನು ತಲುಪಿಸುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲೆ ಇದೆ. ಈ 5 ಗ್ಯಾರಂಟಿಗಳನ್ನು ಈಡೇರಿಸಲು 50 ಸಾವಿರದಿಂದ 1 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಆ ಹಣವನ್ನು ತೆರಿಗೆ ರೂಪದಲ್ಲಿ ಪಡೆಯಬೇಕಾಗುತ್ತದೆ. ಜನರಿಗೆ ಹೊರೆಯಾಗದಂತೆ ಶಾಶ್ವತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಇದು ಸೋಲಲ್ಲ, ನನ್ನ ಮೊದಲ ಗೆಲುವು : ಸೀಕಲ್ ರಾಮಚಂದ್ರಗೌಡ

ಎಲ್ಲ ಫ್ರೀ ಕೊಟ್ರೆ ಆರ್ಥಿಕ ಸಮಸ್ಯೆ ಆಗುತ್ತೆ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕಳೆದ ವರ್ಷ ನೇಮಕಾತಿ ಪ್ರಕ್ರಿಯೆ ಮಾಡಿಲ್ಲ. ಶಿಕ್ಷಣ ಮುಗಿದ ನಂತರ ಉದ್ಯೋಗ ಸೃಷ್ಟಿ ಮಾಡಬೇಕು. ಇದಕ್ಕೆ ಹಣಕಾಸಿನ ನೆರವು ಬೇಕು. ಈ ರೀತಿ ಉಚಿತ ಯೋಜನೆ ಕೊಡುತ್ತಾ ಇದ್ರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಇದರಿಂದ ಯಾವುದೇ ಕೈಗಾರಿಕೆಗಳನ್ನು ತರಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆರ್ಥಿಕ ಹೊಡೆತದಿಂದ ಅಭಿವೃದ್ಧಿ ಕುಂಠಿತ

ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ, ಸಾರಿಗೆ ಮೂಲಭೂತವಾಗಿ ಬೇಕಾಗಿದೆ. ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕೇಂದ್ರಗಳಿಲ್ಲ. ಸಾರಿಗೆ ಉಚಿತ ಅಂತ ಹೇಳಿದ್ರು. ಆದರೆ, ಕೆಲವು ಮಾರ್ಗಗಳಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ. ಹೊಸ ಬಸ್ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ಆರ್ಥಿಕ ಹೊಡೆತದಿಂದ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES