Monday, December 23, 2024

ವಂಚನೆ ಆರೋಪ : ಸಲಗ ಚಿತ್ರದ ನಟಿ ಉಷಾ ಬಂಧನ, ಜಾಮೀನು ಮಂಜೂರು

ಬೆಂಗಳೂರು : ಲಕ್ಷಾಂತರ ರೂ. ವಂಚನೆ ಆರೋಪ ಹಿನ್ನೆಲೆ ಸಲಗ ಚಿತ್ರದಲ್ಲಿ ನಟಿಸಿದ್ದ ನಟಿ ಆರ್. ಉಷಾ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಬಳಿಕ, ವಿಚಾರಣೆ ನಡೆಸಿದ ನ್ಯಾಯಾಲಯವು ನಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಶಿವಮೊಗ್ಗದ ಕಿರುತೆರೆ ನಟ ಶರವಣನ್ ವಂಚನೆಗೊಳಗಾದ ವ್ಯಕ್ತಿ. ಶರವಣ್ ಸಹ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿ ಉಷಾ ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ರೂ. ವಂಚನೆ ಮಾಡಿದ್ದರು. ಈ ಸಂಬಂಧ ವಂಚಿತ ಶರವಣನ್, ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಒಂದಲ್ಲ ಎರಡು, ಸಲಗ ಚಿತ್ರದಲ್ಲಿ ನಟನೆ

ವಂಚನ ದೂರಿನ ಮೇರೆಗೆ ವಾರಂಟ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆ ಚಿತ್ರನಟಿಯನ್ನು ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಟಿ ಉಷಾ ಅವರು ಒಂದಲ್ಲ ಎರಡು, ಸಲಗ ಚಿತ್ರಗಳಲ್ಲಿ ನಟಿಸಿದ್ದರು. ಸಲಗ ಚಿತ್ರದಲ್ಲಿ ದುನಿಯಾ ವಿಜಿ‌ ತಾಯಿಯಾಗಿ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ : Me Too Caseಗೆ ಟ್ವಿಸ್ಟ್ : ನಟಿ ಶ್ರುತಿ ಹರಿಹರನ್ ಗೆ ನೋಟಿಸ್ ಜಾರಿ

ಶರವಣನ್ ನಟಿ ಉಷಾರನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಉಷಾ, ಶರವಣನ್​ ನಿಂದ ಲಕ್ಷಾಂತರ ರೂ. ದುಡ್ಡು ಪಡೆದಿದ್ದರು. ಆದರೆ, ಮದುವೆ ಆಗು ಎಂದಾಗ ಉಷಾ ಹಿಂದೇಟು ಹಾಕಿದ್ದಾರೆ. ಹೀಗಾಗಿ, ಶರವಣನ್ ಅವರು ಉಷಾ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಮಧ್ಯಂತರ ಜಾಮೀನು ಮಂಜೂರು

ಇನ್ನು ನಟಿ ಉಷಾ ಅವರನ್ನು ಪೊಲೀಸರು ಇಂದು ಸಂಜೆ ವೈದ್ಯಕೀಯ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಶಿವಮೊಗ್ಗದಲ್ಲಿ ನ್ಯಾಯಾಲಯವು ಚಿತ್ರನಟಿ ಉಷಾಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

RELATED ARTICLES

Related Articles

TRENDING ARTICLES