ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಬಳಿಕ 5 ಗ್ಯಾರಂಟಿಗಳ ಜೊತೆಗೆ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಕೂಡ ಜಾರಿಗೆ ಬಂತು ಇದರರಿಂದ ಹಸಿದವರ ಹೊಟ್ಟೆಗೆ ಅನ್ನ ಸಿಕ್ಕಂತಾಗಿತ್ತು. ಅದ್ರೆ ಇದೀಗ ಇಂದಿರಾ ಕ್ಯಾಂಟೀನ್ನಲ್ಲಿ ಮೊಟ್ಟೆ ಕೂಡ ಸಿಗಲಿದೆ.
ಹೌದು, ಇಂದಿರಾ ಕ್ಯಾಂಟೀನ್ನಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಸಿಎಂ ಸೂಚನೆ ಬೆನ್ನಲ್ಲೇ ಅನೇಕ ತಜ್ಞರು ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರಕ್ಕೆ ಮೊಟ್ಟೆ ಬೆಸ್ಟ್ ಎಂದು ಅಭಿಪ್ರಾಯ ಕೊಟ್ಟಿದ್ದಾರೆ.
ಇದನ್ನೂ ಓದಿ: ಮೊದ್ಲು ಎಣ್ಣೆ ಹೊಡೆದಾಗ ಕಿಕ್, ಈಗ ಬಾಟೆಲ್ ನೋಡಿದ್ರೇ ಕಿಕ್ : ಆರ್. ಅಶೋಕ್
ಬಡ, ಶ್ರಮಿಕರಾದವರಿಗೆ ಮೊಟ್ಟೆ ಉತ್ತಮ ಪೌಷ್ಟಿಕಾಂಶ. ಹೀಗಾಗಿ ಕಾಂಗ್ರೆಸ್, ಬಿಬಿಎಂಪಿಯ ಮಾಜಿ ಸದಸ್ಯರು ಮೊಟ್ಟೆಗೆ ಒತ್ತಾಯಿಸಿದ್ದಾರೆ. ವಾರದಲ್ಲಿ ಮೂರು ದಿನವಾದ್ರೂ ಮೊಟ್ಟೆ ನೀಡುವಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡಾ ಇಂದಿರಾ ಕ್ಯಾಂಟೀನ್ ನಲ್ಲಿ ಪೌಷ್ಠಿಕಾಂಶ ಆಹಾರಕ್ಕೆ ಸಲಹೆ ನೀಡಿದ್ದರು. ಇಂದಿರಾ ಕ್ಯಾಂಟೀನ್ ಫುಡ್ ಮೆನು ಬದಲಾವಣೆಗೆ ಸಾರ್ವಜನಿಕರಿಗರ ಒತ್ತಾಯ ಮಾಡಿದ್ದರು. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯನವರೇ ಪುಡ್ ಮೆನು ಚೇಂಜ್ಗೆ ಮುಂದಾಗಿದ್ದರು.
ಸಿಎಂನಿಂದಲೇ ಮೆನು ಫೈನಲ್
ಇಂದಿರಾ ಕ್ಯಾಂಟಿನ್ನಲ್ಲಿ ಬಡವರಿಗೆ ಇನ್ಮುಂದೆ ವೆರೈಟಿ ವೆರೈಟಿ ತಿಂಡಿ, ಊಟ ಸಿಗಲಿದೆ. ಬೆಳಗಿನ ತಿಂಡಿಗೆ ವಿಶೇಷ ತಿಂಡಿ ಖ್ಯಾದ್ಯ, ಮಧ್ಯಾಹ್ನಕ್ಕೆ ಪುಲ್ ಮಿಲ್ಸ್ ಕೂಡ ಸಿಗಲಿದೆ.