Thursday, December 19, 2024

ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ಸ್‌ನೋರು ರಣಹೇಡಿಗಳು ; ರವಿಕುಮಾರ್ ವಾಗ್ದಾಳಿ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಚಿವ ಸಂಪುಟ ನಿರ್ಧಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಾವರ್ಕರ್ ಪಾಠ ಓದಿದರೆ ಮಕ್ಕಳು ದೇಶ ದ್ರೋಹಿ ಆಗುತ್ತಾರಾ? ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್​ನವರು ರಣ ಹೇಡಿಗಳು. ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಉತ್ತರಿಸಿದ್ದಾರೆ.

ಹೌದು, ನಾವು ಈ ವಿಚಾರವನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಲೋಕಸಭೆ, ಜಿಲ್ಲಾ ಪಂಚಾಯತ್ ಚುನಾವಣೆಗೆ ಈ ವಿಚಾರ ತೆಗೆದುಕೊಂಡು ಹೋಗುತ್ತೇವೆ. ಜನರ ಮುಂದೆ ಈ ವಿಚಾರ ಇಡುತ್ತೇವೆ. ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್​ ಅವರಿಗೆ ಮಗೆ ದೇಶ ಭಕ್ತಿ ಇದ್ರೆ, ತಾಕತ್ ಇದ್ರೆ, ಅಂಬೇಡ್ಕರ್ ಅವರು ಕಾಂಗ್ರೆಸ್ ಬಗ್ಗೆ ಏನು ಹೇಳಿದ್ರೂ ಅನ್ನೋದನ್ನ ಪುಸ್ತಕದಲ್ಲಿ ಪ್ರಕಟಿಸಿ ಎಂದು ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ, ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ : ಸುನಿಲ್ ಕುಮಾರ್

ವೀರ ಸಾವರ್ಕರ್ ಪಾಠ ಓದಿದ್ರೆ ಮಕ್ಕಳು ದೇಶ ದ್ರೋಹಿ ಆಗ್ತಾ ಇದ್ರಾ.. ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ಸ್‌ನೋರು ರಣಹೇಡಿಗಳು, ದೇಶದ್ರೋಹಿಗಳು, ನಿಮಗೆ ಟಿಪ್ಪು ಪಾಠ ಬೇಕು. ಮೇಲುಕೋಟೆಯಲ್ಲಿ ಟಿಪ್ಪು ದೌರ್ಜನ್ಯಕ್ಕೆ ಇಂದೂ ಕೂಡ ದೀಪಾವಳಾ ಹಬ್ಬ ಆಚರಿಸ್ತಿಲ್ಲ. ಇದೆಲ್ಲಾ ನಿಮಗೆ ಗೊತ್ತಾ..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ, ಸಿಎಂ ಸಿದ್ದರಾಮಯ್ಯ ಅವರು ಇಷ್ಟು ಕೀಳುಮಟ್ಟಕ್ಕೆ ಇಳಿದು ದೇಶ ದ್ರೋಹ ಕಾರ್ಯ ಮಾಡ್ತಾರೆ ಎಂದು ಭಾವಿಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

RELATED ARTICLES

Related Articles

TRENDING ARTICLES