ಬೆಂಗಳೂರು : ಬಿಪರ್‌ಜಾಯ್ ಚಂಡಮಾರುತ ಗುಜರಾತ್ ಕರಾವಳಿಗೆ ಅಪ್ಪಳಿಸಿದೆ. ಆ ಮೂಲಕ ಸೌರಾಷ್ಟ್ರ ಮತ್ತು ಕಚ್‌ನ ಕರಾವಳಿ ಜಿಲ್ಲೆಗಳಲ್ಲಿ ಬಿಪರ್‌ಜಾಯ್ ಅಬ್ಬರ ಶುರುವಾಗಿದೆ.
ಚಂಡಮಾರುತದ ಪ್ರಭಾವದಿಂದ ಗುಜರಾತಿನಲ್ಲಿ ಭಾರೀ ಗಾಳಿಯೊಂದಿಗೆ ಅಧಿಕ ಮಳೆಯಾಗಿದ್ದು, ಹಲವೆಡೆ ದೊಡ್ಡ ಮರಗಳು ಧರೆರುಳಿವೆ.
ಬಿಪರ್‌ಜಾಯ್ ಕುರಿತು ಗಾಂಧಿನಗರದಲ್ಲಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಪರಿಶೀಲನಾ ಸಭೆ ನಡೆಸಿದರು.ಬಿಪರ್‌ಜಾಯ್ ಹಿನ್ನಲೆಯಲ್ಲಿ ಗುಜರಾತ್ ನವಸಾರಿ ಜಿಲ್ಲೆಯ ಎಲ್ಲಾ ಶಾಲೆಗಳನ್ನು ಜೂನ್ 16ರಂದು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಸೇರಿ 3 ರಾಜ್ಯಗಳಿಗೆ ಹೈ ಅಲರ್ಟ್ : 5 ದಿನ ಭಾರೀ ಮಳೆ ಸಾಧ್ಯತೆ
NDRF, SDRF ಕಾರ್ಯಾಚರಣೆ
ಬಿಪರ್ ಜಾಯ್ ಪರಿಣಾಮ ಮೋರ್ಬಿಯಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಮುಂದುವರೆದಿದೆ. NDRF ಮತ್ತು SDRF ತಂಡಗಳು ಜನರು ಮತ್ತು ಜಾನುವಾರುಗಳನ್ನು ತಗ್ಗು ಪ್ರದೇಶದಿಂದ, ಕರಾವಳಿ ಪ್ರದೇಶಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಿವೆ.
ಇನ್ನೂ ವೇಗದ ಗಾಳಿ, ಉಬ್ಬರವಿಳಿತ ಹಾಗೂ ಭಾರೀ ಮಳೆಯಿಂದಾಗಿ ತಾತ್ಕಾಲಿಕ ವಸತಿಗಳಿಗೆ ವ್ಯಾಪಕ ಹಾನಿಯಾಗುವ ಸಾಧ್ಯತೆಯಿದೆ. ಮರಗಳು ಮತ್ತು ಕೊಂಬೆಗಳು ಬೀಳುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.