Sunday, November 17, 2024

ಪಠ್ಯ ತೆಗೆದಿದ್ದು ಅವರು, ಮೂತಿಗೆ ಒರೆಸಿದ್ದು ರೋಹಿತ್ ಚಕ್ರತೀರ್ಥಗೆ : ಬಿ.ಸಿ ನಾಗೇಶ್

ಬೆಂಗಳೂರು : ಪಠ್ಯ ತೆಗೆದಿದ್ದು ಅವರು, ಮೂತಿಗೆ ಒರೆಸಿದ್ದು ರೋಹಿತ್ ಚಕ್ರ ತೀರ್ಥಗೆ ಎಂದು ಮಾಜಿ ಸಚಿವ ಬಿ.ಸಿ ನಾಗೇಶ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅನೇಕ ಪಠ್ಯ ತೆಗೆದಿದ್ದು ಬರಗೂರು ರಾಮಚಂದ್ರಪ್ಪ ಹೊರೆತು, ರೋಹಿತ್ ಚಕ್ರತೀರ್ಥ ಅಲ್ಲ ಎಂದು ಹೇಳಿದ್ದಾರೆ.

ಬದಲಾದ ಸರ್ಕಾರ ಏಕಾಏಕಿ ಪಠ್ಯ ಪರಿಷ್ಕರಣೆ ಮಾಡಲು ಹೊರಟಿದೆ. ಯಾವುದೇ ವಿಚಾರವನ್ನು ಕೆಳಕ್ಕಿಳಿದು, ಆಳವಾಗಿ ಅಧ್ಯಯನ ಮಾಡಿ. ಅಕಸ್ಮಾತಾಗಿ ತಪ್ಪಾಗಿದ್ರೆ ತೆಗೀತೀವಿ ಅಂತ ಹೇಳ್ತಾರೆ. ಪಠ್ಯ ಪುಸ್ತಕ ಕೊಠಾರಿಯಾ ಕಮೀಷನ್ ಮಕ್ಕಳಿಗೆ ಪಾಠ ಮಾಡೋದು ಕೆರಿಕುಲಮ್‌ನಲ್ಲಿ ಇರಬೇಕು. 2005ರ ವರೆಗೂ ನ್ಯಾಷನಲ್ ಕೆರಿಕುಲಮ್ ಇರಲಿಲ್ಲ. 2005ರಲ್ಲಿ ಒಂದು ಫ್ರೇಮ್ ಆಗಬೇಕು ಅಂತ ಸಲಹೆ ಬಂತು ಎಂದು ತಿಳಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅನಾವಶ್ಯಕವಾಗಿ ತುರುಕಿದ್ದಾರೆ

ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಒಂದು ಕಮಿಟಿ ಮಾಡಲಾಗಿತ್ತು. ನೂರಕ್ಕೂ ಹೆಚ್ಚು ಶಿಕ್ಷಣ ತಜ್ಞರ ಚರ್ಚೆ ಬಳಿಕ 2013ರಲ್ಲಿ ಹೊಸ ಪಠ್ಯ ಬಂತು. ಮಕ್ಕಳ ಪಾಠ ಹೇಗುರಬೇಕು ಅಂತ ಪಠ್ಯ ಭೋದನೆ ಮಾಡಿದ ಶಿಕ್ಷಕರ ಸಲಹೆ ಪಡೆಯಲಾಗಿತ್ತು. ಬಳಿಕ ಹಂತ ಹಂತವಾಗಿ ಪಠ್ಯ ಬಂತು. ಸಿದ್ದರಾಮಯ್ಯ ಸಿಎಂ‌ ಆಗಿದ್ದಾಗ ಜಾರಿಗೆ ಬಂತು. ಪಠ್ಯ ರಚನೆಯಾದ ಹತ್ತು ವರ್ಷಗಳ ಬಳಿಕ ಪರಿಷ್ಕರಣೆ ಆಗಬೇಕು ಅಂತಿತ್ತು. ಆದರೆ ಬರಗೂರು ರಾಮಚಂದ್ರಪ್ಪ ಅವರು ಅನಾವಶ್ಯಕವಾಗಿ ತುರುಕಿದ್ದಾರೆ ಅಂತ ರಿಪೋರ್ಟ್ ಬಂತು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : PUC ಫೇಲ್ ಆದ ಖರ್ಗೆ, ಸೂಲಿಬೆಲೆ ವಿದ್ಯಾರ್ಹತೆ ಪ್ರಶ್ನಿಸಿದ್ದು ಹಾಸ್ಯಾಸ್ಪದ : ಶಾಸಕ ಡಾ. ಭರತ್ ಶೆಟ್ಟಿ

ರಾಜಕೀಯ ದೃಷ್ಟಿಯಿಂದ ಪರಿಷ್ಕರಣೆ ಮಾಡಲಿಲ್ಲ

ಪೋಷಕರು ಕೂಡ ವಿರೋಧ ಮಾಡಿದ್ದರು. ಬಳಿಕ ಎನ್​ಸಿಇಆರ್​ಟಿ (NCERT) ಕೂತು ಮಾಡಲಾಯ್ತು. ರೋಹಿತ್ ಚಕ್ರತೀರ್ಥ ಅವರ ಸಮಿತಿ ಎರಡು ವಿಚಾರ ಮಾತ್ರ ಪರಿಷ್ಕರಣೆ ಮಾಡಿತು. ಯಾವುದೇ ರಾಜಕೀಯ ದೃಷ್ಟಿಯಿಂದ ಪರಿಷ್ಕರಣೆ ಮಾಡಲಿಲ್ಲ. ಎನ್​ಇಪಿ (NEP) ಬರ್ತಿರೋ‌ ದೃಷ್ಟಿಯಿಂದ ಮಾಡಲಾಗಿತ್ತು. ಪಠ್ಯ ಪರಿಷ್ಕರಣೆ ಬಗ್ಗೆ ಪಬ್ಲಿಕ್ ಡೊಮೈನ್ ನಲ್ಲಿ ಹಾಕಲಾಗಿತ್ತು ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ.

ಈಗ ಕಾಂಗ್ರೆಸ್ ಸರ್ಕಾರ ಏಕಾಏಕಿ ಪಠ್ಯ ಬದಲಾವಣೆ ಮಾಡೋದು ಸರಿಯಲ್ಲ. ಒಂದು ವೇಳೆ ಬದಲಾವಣೆ ಮಾಡಲೇಬೇಕು ಅಂತಿದ್ರೆ, ಪಬ್ಲಿಕ್ ಡೊಮೈನ್ ನಲ್ಲಿ ಹಾಕಲಿ. ಪೋಷಕರು, ಶಿಕ್ಷಕರ ಅಭಿಪ್ರಾಯ ಪಡೆಯಲಿ. ಇಲ್ಲದಿದ್ರೆ ಸಾರ್ವಜನಿಕರ ಬಳಿ ಹೋಗ್ತೀವಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES