ಬೆಂಗಳೂರು : ಇಬ್ಬರೂ ಸೇರಿ ಸಹಿ ಹಾಕಿ ಕೊಟ್ರಿ, ಆಗ ಜ್ಞಾನ ಇರಲಿಲ್ವಾ? ಎಂದು ಶಾಸಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಸಿಎಂ ಹಾಗೂ ಡಿಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಲೇ ಹೇಳ್ತೀನಿ ಬರೆದಿಟ್ಟುಕೊಳ್ಳಿ. ಕರ್ನಾಟಕವನ್ನ ದಿವಾಳಿ ಮಾಡೋ ಕಾಲ ಹತ್ತಿರದಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.
ಇವರ ಕೈಯಲ್ಲಿ ಏನು ಕೊಡೋಕೆ ಆಗಲ್ಲ, ಇವರು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡ್ತಾರೆ. ಶ್ರೀಲಂಕಾ ತರ ದಿವಾಳಿ ಮಾಡ್ತಾರೆ. ಮನಮೋಹನ್ ಸಿಂಗ್ ಇದ್ದಾಗ ಯಾಕೆ ಕೇಳಲಿಲ್ಲ. ಈಗ ಮೋದಿ ಸರ್ಕಾರ ಕೇಳ್ತೀರಾ? ಜ್ಞಾನ ಇರಲಿಲ್ವಾ? ಇಬ್ಬರೂ ಸೇರಿ ಸಹಿ ಹಾಕಿ ಕೊಟ್ರಿ? ಆಗ ಪರಿಜ್ಞಾನ ಇರಲಿಲ್ವಾ? ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಪಠ್ಯ ತೆಗೆದಿದ್ದು ಅವರು, ಮೂತಿಗೆ ಒರೆಸಿದ್ದು ರೋಹಿತ್ ಚಕ್ರತೀರ್ಥಗೆ : ಬಿ.ಸಿ ನಾಗೇಶ್
ಒಂದು ವರ್ಷಕ್ಕೆ ರಾಜ್ಯ ದಿವಾಳಿ ಆಗುತ್ತೆ
ಇನ್ನೂ ಒಂದು ವರ್ಷಕ್ಕೆ ರಾಜ್ಯ ದಿವಾಳಿ ಆಗುತ್ತೆ. ಕೇಂದ್ರ ಸರ್ಕಾರದಿಂದ ಅಕ್ಕಿ ತಗೊಂಡು ಕೊಡ್ತೀವಿ ಅಂತ ನಿಮ್ಮ ಗ್ಯಾರಂಟಿ ಕಾರ್ಡ್ನಲ್ಲಿ ಬರೆಯಬೇಕಿತ್ತು. ತಿಮ್ಮಕ್ಕ, ಬೊಮ್ಮಕ್ಕ ಎಲ್ಲಾ ಫ್ರೀ ಅಂದ್ರಿ. ಕರೆಂಟ್ ಬಿಲ್ ಹೆಚ್ಚಳಕ್ಕೆ ಬಿಜೆಪಿ ಕಾರಣ ಅಂತೀರಾ. ನಾವು ಇದ್ವಾ ಕರೆಂಟ್ ಬಿಲ್ ಜಾಸ್ತಿ ಆದಾಗ? ನಮ್ಮ ಸರ್ಕಾರ ಇದ್ದಾಗ ಆಗದ ಹೆಚ್ಚಳ ಈಗ ಮಾಡಿದ್ದಾರೆ ಎಂದು ಆರ್. ಅಶೋಕ್ ಛೇಡಿಸಿದ್ದಾರೆ.
ರಾಜ್ಯವನ್ನ ATM ಮಾಡ್ಕೊಳೊಕ್ಕೆ ಹೊರಟಿದ್ದಾರೆ
ರಾಜ್ಯಪಾಲರನ್ನು ಭೇಟಿ ಮಾಡಿದ್ವಿ. ಬಿಬಿಎಂಪಿ ಕಚೇರಿಯನ್ನು ಕಾಂಗ್ರೆಸ್ ಕಚೇರಿ ಮಾಡಲು ಹೊರಟಿದ್ದಾರೆ. ಈ ಬಗ್ಗೆ ದೂರು ಕೊಟ್ವಿ. ಸುರ್ಜೇವಾಲ ಬಂದು ಸಭೆ ಮಾಡಿದ್ದಾರೆ. ಅವರಿಗೂ ಬೆಂಗಳೂರುಗೂ ಏನ್ ರಿಲೇಶನ್ಸ್ ಶಿಪ್ ಇದೆ. ನಮ್ಮ ಸಂಸದರನ್ನ ಬಿಟ್ಟು ಏನ್ ಚರ್ಚೆ ಮಾಡ್ತಾರೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ಏನ್ ಚರ್ಚೆ ಮಾಡ್ತಾರೆ. ಬಿಬಿಎಂಪಿ ಚುನಾವಣೆ ಬಗ್ಗೆ ಏನ್ ಚರ್ಚೆ ಮಾಡ್ತಾರೆ. ಕಾಂಗ್ರೆಸ್ ನವರು ಕರ್ನಾಟಕವನ್ನು ಎಟಿಎಂ ಮಾಡ್ಕೊಳೊಕ್ಕೆ ಹೊರಟಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೀವಿ ಎಂದು ಹೇಳಿದ್ದಾರೆ.