ತುಮಕೂರು : ನಾನು ಸಿಟಿ ರೌಂಡ್ಗೆ ಹೋಗಬೇಕಾಗಿತ್ತು. ಅವರು ನನ್ನ ಪಿಕ್ ಅಪ್ ಮಾಡೋಕೆ ಬಂದಿದ್ರು ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುರ್ಜೇವಾಲ ಅಧಿಕಾರಿಗಳ ಜೊತೆ ಸಭೆ ವಿಚಾರ ಕುರಿತು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರಿಗೆ ಬೇಕಾದರೂ ದೂರು ಕೊಡ್ಲಿ.ನಾವು ಸುರ್ಜೆವಾಲಾ ಅವರು ಕಾಫಿ ಕುಡಿಯೋಕೆ ಅಲ್ಲಿ ಕುಂತಿದ್ದು ಅಷ್ಟೇ ಎಂದು ತಿಳಿಸಿದ್ದಾರೆ.
ಪಾಪ ಸಚಿವ ಜಮೀರ್ ಅಹಮದ್ ಅವರು ಒಂದು ಸಭೆ ಮಾಡಿದ್ದೀನಿ ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ, ಫೋಟೋ ಲೀಕ್ ಆಗಿದೆ. ಆಫೀಸಸರ್ಸ್ಗೂ, ಸುರ್ಜೆವಾಲಗೂ, ಸಭೆಗೂ ಯಾವುದೇ ಸಂಬಂಧ ಇಲ್ಲ. ನಾವು ಯಾರು ಮೀಟಿಂಗ್ ಕರೆದಿಲ್ಲ. ರಾಜ್ಯಪಾಲರಿಗೆ ಬೇಕಾದ ದೂರು ಕೊಡ್ಲಿ, ಇನ್ಯಾರಿಗೆ ಬೇಕಾದ ದೂರು ಕೊಡ್ಲಿ. ಇಂಥ ಮೀಟಿಂಗ್ಗಳು ಬಿಜೆಪಿ ಅವರು ಎಷ್ಟು ಮಾಡಿದ್ದಾರೆ ಅನ್ನೋದು ನಮ್ಮತ್ರನೂ ಪಟ್ಟಿ ಇದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : ಪರ್ಸಂಟೇಜ್ ಡೀಲ್ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ : ಅಶ್ವತ್ಥನಾರಾಯಣ
ಅದು ಅವರ ಪಾರ್ಟಿಗೆ ಬಿಟ್ಟಿದ್ದು
ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕಾರಣ ಕುರಿತು ಪ್ರತಾಪ್ ಸಿಂಹ ಹೇಳಿಕೆ ವಿಚಾರ ಮಾತನಾಡಿ, ನಾವು ಅವರ ಆಂತರಿಕ ವಿಚಾರಕ್ಕೆ ಮಧ್ಯಪ್ರವೇಶ ಮಾಡಲ್ಲ. ಅವರು ಏನು ಬೇಕಾದರೂ ಮಾತಾಡಿಕೊಳ್ಳಿ. ಅದು ಅವರ ಪಾರ್ಟಿಗೆ ಬಿಟ್ಟಿದ್ದು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಸಿಎಂ ಆಗೋದನ್ನು ಪಕ್ಷದವರೇ ತಪ್ಪಿಸಿದ್ರು ಎಂಬ ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಬಹಳ ಸಂತೋಷ. ಅವರ ಅಭಿಪ್ರಾಯ ಏನಿದೆ ಅದನ್ನು ಅವರ ಬಳಿನೇ ಚರ್ಚೆ ಮಾಡಿ
ಎಂದು ಡಿ.ಕೆ ಶಿವಕುಮಾರ್ ನುಣುಚಿಕೊಂಡಿದ್ದಾರೆ.