ಕಲಬುರಗಿ : ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರ ಆದೇಶ ವಿಚಾರ ಕೇಂದ್ರದ ನಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಸಿವು ಮುಕ್ತ ರಾಜ್ಯ ನಿರ್ಮಿಸಲು ಕಾಂಗ್ರೆಸ್ ಸರ್ಕಾರ ಜನರಿಗೆ 10 ಕಿಲೋ ಅಕ್ಕಿ ಕೊಡಲು ಪಣತೊಟ್ಟಿದೆ ಎಂದು ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಗಾಗಿ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು FCI ನಿಂದ ಖರೀದಿಸಲು ಮುಂದಾಗಿದ್ದೇವೆ. ಆದರೆ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಂತೆ ಆದೇಶಿಸಿದೆ. ಇದು ದುಷ್ಟ ರಾಜಕಾರಣ, ಬಡವರ ಹೊಟ್ಟೆ ಮೇಲೆ ಹೊಡೆಯುವ ಕೃತ್ಯ ಎಂದು ಕಿಡಿಕಾರಿದ್ದಾರೆ.
6 ಮತ್ತು 3 ಸೀಟ್ ಗೆ ಇಳಿಯಲಿದೆ
ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪಲು ಬಿಡದಂತೆ ಕೇಂದ್ರ ಬಿಜೆಪಿ ಸರ್ಕಾರ ಷಡ್ಯಂತ್ರ ಮಾಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ 63 ಸೀಟ್‌ಗೆ ತೃಪ್ತಿಪಡಬೇಕಾಗಿದೆ. ಇದೇ ರೀತಿ ದುಷ್ಟ ರಾಜಕಾರಣ ಮುಂದುವರಿದರೆ ಮುಂದೆ 6 ಮತ್ತು 3 ಸೀಟ್ ಆಗಲಿದೆ. ಇದು ಗ್ಯಾರಂಟಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಗ್ಯಾರೆಂಟಿಗಳು ಜನರಿಗೆ ತಲುಪಲ ಬಿಡದಂತೆ ಕೇಂದ್ರ BJP ಸರ್ಕಾರದ ಈ ರೀತಿ ಷಡ್ಯಂತ್ರ ನಡೆಸಲು ಮುಂದಾಗಿರುವುದು ನಾಚಿಗೇಡಿನ ವಿಚಾರ.
ಈಗಾಗಲೇ ರಾಜ್ಯದಲ್ಲಿ BJP 63 ಮತ್ತೊಂದು ಸೀಟಿಗೆ ತೃಪ್ತಿಪಡಬೇಕಾಗಿದೆ. ಇದೇ ರೀತಿ ದುಷ್ಟ ರಾಜಕಾರಣ ಮುಂದುವರೆಸಿದರೆ, ಮುಂದೆ ಅದು 6 ಮತ್ತು 3 ಆಗಲಿದೆ. ಇದು ಗ್ಯಾರಂಟಿ.
2/2— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 14, 2023
ಇದನ್ನೂ ಓದಿ : ಸುರ್ಜೇವಾಲ ನನ್ನ ಪಿಕ್ ಅಪ್ ಮಾಡೋಕೆ ಬಂದಿದ್ರು : ಡಿ.ಕೆ ಶಿವಕುಮಾರ್
ಗ್ಯಾರಂಟಿ ಕಾರ್ಡ್ನಲ್ಲಿ ಬರೆಯಬೇಕಿತ್ತು
ಕೇಂದ್ರ ಸರ್ಕಾರದಿಂದ ಅಕ್ಕಿ ತಗೊಂಡು ಕೊಡ್ತೀವಿ ಅಂತ ನಿಮ್ಮ ಗ್ಯಾರಂಟಿ ಕಾರ್ಡ್ನಲ್ಲಿ ಬರೆಯಬೇಕಿತ್ತು ಎಂದು ಮಾಜಿ ಸಚಿವ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ತಿಮ್ಮಕ್ಕ, ಬೊಮ್ಮಕ್ಕ ಎಲ್ಲಾ ಫ್ರೀ ಅಂದ್ರಿ. ಕರೆಂಟ್ ಬಿಲ್ ಹೆಚ್ಚಳಕ್ಕೆ ಬಿಜೆಪಿ ಕಾರಣ ಅಂತೀರಾ. ನಾವು ಇದ್ವಾ ಕರೆಂಟ್ ಬಿಲ್ ಜಾಸ್ತಿ ಆದಾಗ? ನಮ್ಮ ಸರ್ಕಾರ ಇದ್ದಾಗ ಆಗದ ಹೆಚ್ಚಳ ಈಗ ಮಾಡಿದ್ದಾರೆ. ಇನ್ನೂ ಒಂದು ವರ್ಷಕ್ಕೆ ರಾಜ್ಯ ದಿವಾಳಿ ಆಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.