ಬೆಂಗಳೂರು : ದಲಿತ ಸಿಎಂ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ನಾಳೆಯೇ ಹೋಗಿ ಸಿಎಂ ಆಗಬೇಕು ಅಂತ ನಾವು ಕೇಳಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಲಿತ ಸಿಎಂ ವಿಚಾರದಲ್ಲಿ ನೀವು ಬಹಳ ಡೀಪ್ ಆಗಿ ಹೋಗುವ ಅಗತ್ಯವಿಲ್ಲ. ನಮ್ಮ ಸಮುದಾಯಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮಾತನಾಡಿದ್ದೇನೆ. ನಾಳೆಯೇ ಹೋಗಿ ನಾವು ಸಿಎಂ ಆಗಬೇಕು ಅಂತ ಕೇಳಲ್ಲ. ಯಾವುದೇ ಗೊಂದಲವಾದ ಮಾತುಗಳು ಅದರಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಚಿವರನ್ನು ದೆಹಲಿಗೆ ಕರೆದ ವಿಚಾರ ಕುರಿತು ಮಾತನಾಡಿ, ಸೂಚನೆ ಇನ್ನೂ ಬಂದಿಲ್ಲ, ಒಂದು ವೇಳೆ ಕರೆದರೆ ಒಳ್ಳೆಯದು. ಯಾವ ರೀತಿ ಕೆಲಸ ಮಾಡಿದ್ದೇವೆ ಎಂದು ನೋಡುವುದಾದರೆ ಒಳ್ಳೆಯದು. ನಮ್ಮದು ಎಲ್ಲಾ ಸರಿಯಾದ ದಾರಿ ಹೋಗಬೇಕು ಎಂದು. ಬಿಜೆಪಿ ಅವರು ಈ ರೀತಿ ಮಾಡದೆ ಇರುವ ಕಾರಣಕ್ಕೆ ಆ ಪರಿಸ್ಥಿತಿ ಆಗಿದೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದ ಒಳಗೆ ಸಭೆ ಮಾಡಿದ್ರೆ ತಪ್ಪು
ಸುರ್ಜೆವಾಲ ಅಧಿಕಾರಿಗಳ ಸಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅಧಿಕೃತ ಸಭೆ ಆಗಿರಲಿಲ್ಲ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಭೆ ನಡೆಸಿದ್ದರು. ಆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಅಷ್ಟೇ. ವಿಧಾನಸೌಧದ ಒಳಗೆ ಸಭೆ ಮಾಡಿದ್ರೆ ತಪ್ಪು. ಖಾಸಗಿ ಹೊಟೇಲ್ನಲ್ಲಿ ಡಿ.ಕೆ ಶಿವಕುಮಾರ್ ಸಭೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸುರ್ಜೇವಾಲ ಬಂದಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಬಿಜೆಪಿಯವರು ದೂರು ನೀಡಲಿ. ರಾಜಭವನದವರು ಪರಿಶೀಲನೆ ಮಾಡ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಮ್ಮ ಪಾರ್ಟಿಯಲ್ಲಿ ಅಡ್ಜೆಸ್ಟ್ಮೆಂಟ್ ರಾಜಕಾರಣಿಗಳಿದ್ದಾರೆ ; ಸಿಟಿ ರವಿ ಸಿಡಿಮಿಡಿ
ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು
ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ನಿರ್ಧಾರ ಕುರಿತು ಮಾತನಾಡಿ, ಬಿಟ್ ಕಾಯಿನ್ ಪ್ರಕರಣವನ್ನೂ ಮರು ಪರಿಶೀಲನೆ ಮಾಡುತ್ತೇವೆ. ಬಿಜೆಪಿಯವರು ಈಗಲೇ ಕುಣಿದಾಡ್ತಿದ್ದಾರೆ. ನಮ್ಮ ಸರ್ಕಾರ ಬಂದು 20 ದಿನ ಆಗಿದೆ ಅಷ್ಟೇ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು. ಬಿಟ್ ಕಾಯಿನ್ ಪ್ರಕರಣವನ್ನೂ ಮರು ಪರಿಶೀಲನೆ ಮಾಡ್ತೇವೆ ಎಂದು ಡಾ.ಜಿ ಪರಮೇಶ್ವರ್ ವಿಪಕ್ಷ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಔರಾದ್ಕರ್ ವರದಿ ವಿಚಾರ ಪ್ರತಿಕ್ರಿಯಿಸಿದ ಪರಮೇಶ್ವರ್, ಸುಮಾರು ಅಂಶಗಳು ಜಾರಿಯಾಗಿವೆ. ಸಂಬಳ ಹಾಗೂ ಬಡ್ತಿ ಬಗ್ಗೆ ಮುಂದಿನ ದಿನದಲ್ಲಿ ಮಾಡೋಣ. ಪ್ರಮೋಷನ್ ಬಂದಿದೆ ಎಂದಾಗಾ ನಿಲ್ಲಿಸಬಾರದು ಅಂತ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.