Saturday, November 2, 2024

ಮೊದ್ಲು ಎಣ್ಣೆ ಹೊಡೆದಾಗ ಕಿಕ್, ಈಗ ಬಾಟೆಲ್ ನೋಡಿದ್ರೇ ಕಿಕ್ : ಆರ್. ಅಶೋಕ್

ಬೆಂಗಳೂರು : ಮೊದಲು ಎಣ್ಣೆ ಹೊಡೆದಾಗ ಕಿಕ್ ಹೊಡೀತಿತ್ತು. ಈಗ ಬಾಟೆಲ್ ನೋಡಿದ್ರೆ ಕಿಕ್ ಹೊಡೆಯುತ್ತೆ ಎಂದು ಶಾಸಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಕಾಂಗ್ರೆಸ್​ಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಬ್ಬರಿಗೆ ತಲೆ ಇರೋದು. ಅವರು ಪಕ್ಕಾ ಬ್ಯುಸಿನೆಸ್ ಮ್ಯಾನ್ ಎಂದು ಕಾಲೆಳೆದಿದ್ದಾರೆ.

ಕೊಟ್ಟಂಗೂ ಆಗಬೇಕು, ಕಿತ್ತುಕೊಂಡಂಗೂ ಆಗಬೇಕು. ಜಿಎಸ್​ಟಿ(GST) ಕೂಡ ರಾಜ್ಯಕ್ಕೆ ಬರೋದು. ಎಣ್ಣೆ ಹೊಡೆಯೋರು ಈಗಲೇ ಕುಡಿದುಬಿಡಿ. ಅದರ ದರವೂ ಹೆಚ್ಚಳ ಆಗುತ್ತೆ. ಮೊದಲು ಎಣ್ಣೆ ಹೊಡೆದಾಗ ಕಿಕ್ ಹೊಡೀತಿತ್ತು. ಈಗ ಬಾಟೆಲ್ ನೋಡಿದ್ರೆ ಕಿಕ್ ಹೊಡೆಯುತ್ತೆ. ಈಗಲೇ ಬರೆದಿಟ್ಟುಕೊಳ್ಳಿ, ಇವೆಲ್ಲಾ ದರ ಹೆಚ್ಚಳವಾಗುತ್ತೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.

2,000 ಕೊಟ್ಟು ಹೆಚ್ಚು ವಸೂಲಿ

ಪೆಟ್ರೋಲ್, ಡೀಸೆಲ್ ಹೆಚ್ಚಳ ಜಾಸ್ತಿ ಆಗುತ್ತೆ. ಕುಡಿಯುವ ನೀರಿನ ದರ ಏರಿಕೆ ಆಗುತ್ತೆ. ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಗ್ಯಾರಂಟಿ. 15ರಿಂದ 20% ಸ್ಟ್ಯಾಂಪ್ ಡ್ಯೂಟಿ ಏರಿಕೆ ಆಗುತ್ತೆ. ಇದೆಲ್ಲಾ ಹೆಚ್ಚಾದ ಮೇಲೆ ತರಕಾರಿ, ದವಸ, ಧಾನ್ಯ ಹೆಚ್ಚಳ ಮಾಡ್ತಾರೆ. ಈ ಮೂಲಕ 2,000 ರೂಪಾಯಿ ಕೊಟ್ಟು, ಅದಕ್ಕಿಂತ ಹೆಚ್ಚು ವಸೂಲಿ ಮಾಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಪರ್ಸಂಟೇಜ್ ಡೀಲ್​ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ : ಅಶ್ವತ್ಥನಾರಾಯಣ 

ನಾವೇ ಶಾಶ್ವತ ಅಂದುಕೊಂಡಿದ್ದಾರೆ

ಸುರ್ಜೇವಾಲ ಅಧಿಕಾರಿಗಳ ಜೊತೆ ಸಭೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಅವರಿಗೆ ಅಧಿಕಾರದ ಮದ ಬಂದಿದೆ. ಅದಕ್ಕಾಗಿ ಅವರು ಹೀಗೆ ಮಾಡ್ತಿದ್ದಾರೆ. ನಾವೇ ಶಾಶ್ವತ ಅಂದುಕೊಂಡಿದ್ದಾರೆ. ನಾಲ್ಕು ದಿನಕ್ಕೆ ಈ ರೀತಿ ಮದ ಬಂದಿದೆ. ಅಧಿಕಾರಿಗಳು ಅವರು ಬಂದ್ರೆ ಎದ್ದು ಹೋಗಬೇಕಿತ್ತು. ಇದರಲ್ಲಿ ಅಧಿಕಾರಿಗಳ ಲೋಪ ಕೂಡ ಇದೆ. ಮಾಧ್ಯಮದಲ್ಲಿ ಬಂದಿದೆ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಅಕ್ಕಿ ಕೊಡಲು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನಾನು ರಾಜ್ಯದ ಜನರಿಗೆ ಹೇಳೋದು ಏನಂದ್ರೆ, ಇನ್ಮೇಲೆ ಸರ್ಕಾರದಲ್ಲಿ ಏನೇ ಆದರೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತೆ. ಇನ್ನೂ ಒಂದು ವರ್ಷಕ್ಕೆ ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES