Friday, November 22, 2024

ಇಂದಿನಿಂದ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ

ಬೆಂಗಳೂರು: ಹೊಸ ಸರ್ಕಾರ ರಚನೆ ಬಳಿಕ ಮೊದಲ ಸಲ ಬಜೆಟ್ ಮಂಡನೆಗೆ ರಾಜ್ಯಸರ್ಕಾರ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿದೆ.

ಹೌದು, ಇಂದು ಸಿಎಂ ಸಿದ್ದರಾಮಯ್ಯ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಭೆ ಆರಂಭವಾಗಲಿದೆ. ಇನ್ನೂ ಜುಲೈ 7ರಂದು ಹೊಸ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಇನ್ನೂ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಭಾರೀ ಮೊತ್ತದ ಅನುದಾನ ಹಂಚಿಕೆ ಮಾಡಲು ದೊಡ್ಡ ಆರ್ಥಿಕ ಸಂಪನ್ಮೂಲ ಬೇಕಾಗುವುದರಿಂದ ಹೊಸ ಘೋಷಣೆಗಳು ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕ ಹೊರೆ ಆಗದಂತಹ ಹೊಸ ಪ್ರಸ್ತಾವನೆಗಳನ್ನಷ್ಟೇ ತರುವಂತೆ ಆಯಾ ಇಲಾಖೆಗಳಿಗೆ ಆರ್ಥಿಕ ಇಲಾಖೆ ಸೂಚನೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ

ಪ್ರತೀ ಇಲಾಖೆಗೆ 30ರಿಂದ 40 ನಿಮಿಷ ಕಾಲಾವಕಾಶ ನೀಡಲಾಗಿದೆ. ಸಮಯದ ಆಭಾವದ ಹಿನ್ನೆಲೆಯಲ್ಲಿ ಹೊಸ ಬಜೆಟ್‌ ಘೋಷಣೆ, ಯೋಜನೆ, ಕಾರ್ಯಕ್ರಮಗಳು ಮತ್ತು ಚಾಲ್ತಿ ಯೋಜನೆಗಳ ಪೈಕಿ ಯಾವುದನ್ನು ಕೈ ಬಿಡಬೇಕು, ಯಾವುದನ್ನು ಕಡಿತಗೊಳಿಸಬೇಕು ಎಂಬುದರ ಕುರಿತ ಚರ್ಚೆಗೆ ಮಾತ್ರ ಬಜೆಟ್‌ ಪೂರ್ವಭಾವಿ ಸಭೆ ಸೀಮಿತಗೊಳಿಸಲಿಗಿದ್ದು, ಜೂನ್‌ 14ರಿಂದ 17ರ ವರೆಗೆ ನಾಲ್ಕು ದಿನ ಬಜೆಟ್‌ ಪೂರ್ವಭಾವಿ ಮ್ಯಾರಥಾನ್‌ ಸಭೆಗಳು ನಡೆಯಲಿವೆ. ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

 

RELATED ARTICLES

Related Articles

TRENDING ARTICLES