ಬೆಂಗಳೂರು : ಸುರ್ಜೇವಾಲಾ ಪರ್ಸಂಟೇಜ್ ಡೀಲ್ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ ಎಂದು ಶಾಸಕ ಹಾಗೂ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ವರಿಷ್ಠರು ಅಧಿಕಾರಿಗಳ ಸಭೆ ಮಾಡಿರುವುದು ಖಂಡನೀಯ. ನಾವು ರಾಜ್ಯಪಾಲರ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ. ಅವರ ನಿಜವಾದ ಉದ್ದೇಶ ಏನು ಅಂತಾ ಗೊತ್ತಿಲ್ಲ. ಪಕ್ಷದ ಪದಾಧಿಕಾರಿ, ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಸಭೆಯಲ್ಲಿ ಸುರ್ಜೇವಾಲ ಭಾಗಿಯಾಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕಾನೂನು ಉಲ್ಲಂಘನೆ ಕಾಂಗ್ರೆಸ್ ಪರಿಪಾಟ
ಕಾನೂನು ಉಲ್ಲಂಘನೆ ಕಾಂಗ್ರೆಸ್ ಪರಿಪಾಟ. ಪರ್ಸಂಟೇಜ್ ಡೀಲ್ಗಾಗಿ ಸಭೆ ಮಾಡಿರಬಹುದೇನೋ, ನನಗೆ ಗೊತ್ತಿಲ್ಲ. ಸಭೆಯಲ್ಲಿ ಸುರ್ಜೇವಾಲಗೆ ಭಾಗವಹಿಸಲು ಅಧಿಕಾರವಿಲ್ಲ, ಭಾಗವಹಿಸಿರುವುದು ತಪ್ಪು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರೇ…
ರಣದೀಪ್ ಸುರ್ಜೇವಾಲ ಅವರಿಗೂ ರಾಜ್ಯ ಸರ್ಕಾರಕ್ಕೂ ಏನು ಸಂಬಂಧ?! ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿಯೊಬ್ಬರು ಸಭೆ ನಡೆಸಿರುವ ಹಿಂದಿನ ಉದ್ದೇಶ ಏನು?
1/2 pic.twitter.com/DxZLSKduJp
— Dr. C.N. Ashwath Narayan (@drashwathcn) June 13, 2023
ಇದನ್ನೂ ಓದಿ : ಪ್ರಿಯಾಂಕ್ ಖರ್ಗೆ ಕೊಟ್ಟಿದ್ದ 6ನೇ ಗ್ಯಾರಂಟಿ ಜಾರಿ
ಅವರದ್ದು ಬಹುಕಾಲದ ಅಪೇಕ್ಷೆ
ಸಿಎಂ ಸ್ಥಾನದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ ಆಕಾಂಕ್ಷೆ ವಿಚಾರ ಕುರಿತು ಮಾತನಾಡಿ, ಅವರದ್ದು ಬಹುಕಾಲದ ಅಪೇಕ್ಷೆ ಇದೆ. ಅವರ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಅಂತಾ ನಿಶ್ಚಯ ಆಗಿದೆ. ಅದರ ಬಗ್ಗೆ ನಾನು ಏನೂ ಹೇಳಲು ಆಗಲ್ಲ, ಅವರಿಗೆ ಶುಭ ಕೋರಬಹುದಷ್ಟೇ ಎಂದು ತಿಳಿಸಿದ್ದಾರೆ.
ಹೊಂದಾಣಿಕೆ ರಾಜಕಾರಣದಿಂದ ಸೋಲು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅದರ ಬಗ್ಗೆ ಹೆಚ್ಚು ಏನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.