Monday, December 23, 2024

Toby Movie : ರಾಜ್​ ಬಿ. ಶೆಟ್ಟಿ ನಟನೆಯ ‘ಟೋಬಿ’ ಸಿನ್ಮಾಗೆ ಡೇಟ್​ ಫಿಕ್ಸ್​ 

ಬೆಂಗಳೂರು : ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಅವರ ಹೊಸ ಸಿನಿಮಾ ಯಾವಾಗ ತರೆ ಮೇಲೆ ಬರುತ್ತರ ಎಂದು ಕಾಯುತ್ತಿರುವ ಫ್ಯಾನ್ಸ್​ಗೆ​ ಗುಡ್​ ನ್ಸೂಸ್​​ ರಾಜ್‌ ಬಿ ಶೆಟ್ಟಿ ಕೊಟ್ಟಿದ್ದಾರೆ.

ಹೌದು,‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಮನ ಗೆದ್ದಿರುವ ರಾಜ್‌ ಬಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಬಹಳ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಸ್ಯಾಂಡಲ್​ ವುಡ್​ನಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಪು ಮೂಡಿಸಿದ್ದರು.

ಇನ್ನೂ ಇವರ ಸಿನಿಮಾದ ಅಪ್​ಡೇಟ್​ಗಾಗಿ ಕಾಯುತ್ತಿದವರಿಗೆ ಅಭಿಮಾನಿಗಳಿಗೆ ಇಂದು ರಾಜ್‌ ಬಿ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡು ಸಿಹಿ ಸುದ್ದಿ ನೀಡಿದ್ದಾರೆ.

ರಾಜ್​ ಬಿ. ಶೆಟ್ಟಿ ಹೊಸ ಚಿತ್ರಕ್ಕೆ ‘ಟೋಬಿ’ (Toby Kannada Movie) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್​ ಅನೌನ್ಸ್​ ಮಾಡುವ ಸಲುವಾಗಿ ಮೋಷನ್​ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ‘ಮಾರಿ.. ಮಾರಿ.. ಮಾರಿಗೆ ದಾರಿ’ ಎಂದು ಕ್ಯಾಪ್ಷನ್​ನೊಂದಿಗೆ ಅವರು ಈ ಸುದ್ದಿ ತಿಳಿಸಿದ್ದಾರೆ. ಇನ್ನು, ‘ಟೋಬಿ’ ಚಿತ್ರದ ರಿಲೀಸ್​ ದಿನಾಂಕದ ಬಗ್ಗೆಯೂ ರಾಜ್​ ಬಿ. ಶೆಟ್ಟಿ  ಅವರು ಅಪ್​ಡೇಟ್​ ನೀಡಿದ್ದಾರೆ. ಆಗಸ್ಟ್​ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಂಯುಕ್ತಾ ಹೊರ್ನಾಡ್‌ ಮತ್ತು ಚೈತ್ರಾ ಜೆ ಆಚಾರ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

RELATED ARTICLES

Related Articles

TRENDING ARTICLES