ಪ್ರತಾಪ್ ಸಿಂಹ ಅವರ ಮಾತಿಗೆ ಮೌಲ್ಯವಿಲ್ಲ ; ಸಚಿವ ಹೆಚ್.ಸಿ.ಮಹದೇವಪ್ಪ - Power TV
Tuesday, January 7, 2025

ಪ್ರತಾಪ್ ಸಿಂಹ ಅವರ ಮಾತಿಗೆ ಮೌಲ್ಯವಿಲ್ಲ ; ಸಚಿವ ಹೆಚ್.ಸಿ.ಮಹದೇವಪ್ಪ

ಬೆಂಗಳೂರು: ‘ರಾಜಿ’ಕಾರಣವನ್ನು ಯಾರ್ಯಾರ ಜೊತೆ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಅವರೇ ಹೇಳಲಿ ಎಂದು ಪ್ರತಾಪ್​ ಸಿಂಹ ವಿರುದ್ಧ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.

ಹೌದು,‘ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರ ಹೊಂದಾಣಿಕೆ ಬಗ್ಗೆ ತನಿಖೆ ಆಗಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಸಿ.ಮಹದೇವಪ್ಪ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತಿನಲ್ಲಿ ಗಾಂಭೀರ್ಯತೆ ಇದೆಯಾ, ಏನಾದ್ರೂ ಅರ್ಥ ಇದೆಯಾ..? ಎಂದು ಕಿಡಿಕಾಡಿದ್ದಾರೆ.

ಇದನ್ನೂ ಓದಿ: ‘ರಾಜಿ’ಕಾರಣ ನಮ್ಮ ಪಕ್ಷದಲ್ಲಿಯೂ ಇದೆ ; ಪ್ರತಾಪ್ ಸಿಂಹ

13 ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಆಳವಾದ ಅನುಭವವಿದೆ ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಸಚಿವ ಹೆಚ್​.ಸಿ.ಮಹದೇವಪ್ಪ ವಾಗ್ವಾದ ಮಾಡಿದ್ದಾರೆ.

40% ಕಮಿಷನ್​ ವಿಚಾರದಲ್ಲಿ ಸರ್ಕಾರ ಗಂಭೀರ ಕ್ರಮಕೈಗೊಳ್ಳಲಿದೆ. ಎಲ್ಲಿ ದುರ್ಬಳಕೆ, ಕಾನೂನು ಉಲ್ಲಂಘನೆ ಆಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಸರ್ಕಾರ ಮೀನಮೇಷ ಎಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

 

 

 

RELATED ARTICLES

Related Articles

TRENDING ARTICLES