Thursday, December 26, 2024

ನಮ್ಮ ಪಾರ್ಟಿಯಲ್ಲಿ ಅಡ್ಜೆಸ್ಟ್​ಮೆಂಟ್ ರಾಜಕಾರಣಿಗಳಿದ್ದಾರೆ ; ಸಿಟಿ ರವಿ ಸಿಡಿಮಿಡಿ

ಬೆಂಗಳೂರು: ಎಲ್ಲಾ ಪಾರ್ಟಿಯಲ್ಲಿಯೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ. ಬಿಜೆಪಿಯಲ್ಲಿಯೂ ಹೊಂದಾಣಿಕೆ ರಾಜಕೀಯವಿದೆ ಎಂದು ಶಾಕಿಂಗ್‌ ಹೇಳಿಕೆಯನ್ನು ಸಿ.ಟಿ.ರವಿ ನೀಡಿದ್ದಾರೆ.

ಹೌದು, ಮಾಧ್ಯಮಗಳೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಟಿ ರವಿ ಕಾಂಗ್ರೆಸ್‌ನವರು ನವರು ಒಂದಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ದರು. ಅದನ್ನೆಲ್ಲ ಕಾಂಗ್ರೆಸ್‌ನವರು ಈಗ ಸಾಬೀತು ಮಾಡಿ ತೋರಿಸಲಿ. ಎಲ್ಲಾ ಪಾರ್ಟಿಯಲ್ಲೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ. ಇದಕ್ಕೆ ಬಿಜೆಪಿಯೂ ಹೊರತಲ್ಲ. ನೇರವಾಗಿ ಮಾತಾಡೋರ ಮೇಲೆ ಮುಗಿಬೀಳುತ್ತಾರೆ ಎಂದು ಹೇಲಿದ್ದಾರೆ.

ಇದನ್ನೂ ಓದಿ: ‘ರಾಜಿ’ಕಾರಣ ನಮ್ಮ ಪಕ್ಷದಲ್ಲಿಯೂ ಇದೆ ; ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ ಹೊಂದಾಣಿಕೆ ಬಾಂಬ್ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು
ಕೆಲ ಸಂಗತಿಗಳನ್ನ ಮಾಧ್ಯಮಗಳ ಮುಂದೆ ಚರ್ಚಿಸಲು ಆಗಲ್ಲ ನಮ್ಮ ಪಕ್ಷದ ವೇದಿಕೆಯಲ್ಲಿ ಮಾತನಾಡ್ತೀವಿ ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್ ಬಗ್ಗೆ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದರು.

ಇಡೀ ದೇಶವನ್ನೇ ಶೆಡ್ಡಿಗೆ ಕಳಿಸಲು ಪ್ಲ್ಯಾನ್​ ಮಾಡ್ತಿದ್ದಾರೆ,ಇನ್ನೂ ‘ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಸೇರಿಕೊಂಡು ಮಾಡ್ತಿದ್ದಾರೆ. ಗ್ಯಾರಂಟಿಗಳ ವಾಗ್ದಾನ ಕೊಟ್ಟಿದ್ದು ಕಾಂಗ್ರೆಸ್. ಈಗ ಗೊಂದಲ ಇಲ್ಲದೇ ಜಾರಿ ಮಾಡಲಿ.

ಅರ್ಕಾವತಿ ಪ್ರಕರಣದಲ್ಲಿ ಅಕ್ರಮ ಆಗಿದೆ ಯಾರು ಅಕ್ರಮ ಮಾಡಿದ ಆ ಖದೀಮ? ಅದರ ಬಗ್ಗೆ ತನಿಖೆ ಮಾಡಿ. ಸೋಲಾರ್ ಹಗರಣ ಕೇಳಿಬಂತು. ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿ ಆರೋಪ ಇತ್ತು. ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸಿದ ಆ ಖದೀಮ ಯಾರು, ತನಿಖೆ ಮಾಡಿ. ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ, ಇವತ್ತು ನಿಮಗೆ ಅಧಿಕಾರ ಇದೆ, ತನಿಖೆ ಮಾಡಿ. ಎಂದು ಕಿಡಿಕಾರಿದ್ದಾರೆ.

ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ ಎಂದರು

 

 

 

 

RELATED ARTICLES

Related Articles

TRENDING ARTICLES