ತುಮಕೂರು : ಸಿದ್ದಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಲಿಂಗೈಕ್ಯರಾಗಿದ್ದಾರೆ. ಆದ್ರೆ, ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನ ಸಿದ್ದರಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಧರ್ಮ ಸೇರಬೇಕು. ಅನೇಕ ಜನ ನಾವು ಧರ್ಮ, ನಮ್ಮದು ಧರ್ಮ ಅಂತಾ ತಿರುಗುತ್ತಾರೆ. ಭಾರತ ಈ ವಿಚಾರಧಾರೆ ಎಲ್ಲರಿಗೂ ಸೇರಿರುವಂತದ್ದು. ಸ್ವತಂತ್ರ ಬಂದ ನಂತರ ಸಂವಿಧಾನದಲ್ಲಿ ಬರೆದಿದ್ದಾರೆ. ಅವರವರ ಧರ್ಮ ಆಚರಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿದ್ದಗಂಗಾ ಮಠಕ್ಕೆ ಬಂದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ : ಸಚಿವ ಈಶ್ವರ್ ಖಂಡ್ರೆ
ಧರ್ಮ ಎಲ್ಲರಿಗೂ ಸೇರಬೇಕು
ಧರ್ಮ ಎಲ್ಲರಿಗೂ ಸೇರಬೇಕು ಅನ್ನೋ ವಿಚಾರದಲ್ಲಿ ನಂಬಿಕೆ ಇಟ್ಟಿರುವವನು ನಾನು. ರಂಭಾಪುರಿ ಸ್ವಾಮೀಗಳು ಆ ದೃಷ್ಟಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಧರ್ಮದ ವಿಚಾರವನ್ನು ಸಾರವುದಕ್ಕಾಗಿ ಅವರ ಜೀವನ ಮುಡುಪಾಗಿಟ್ಟಿದ್ದಾರೆ. ಈ ಕಾಲಘಟ್ಟದಲ್ಲಿ ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಲಿಂಗೈಕ್ಯರಾಗಿದ್ದಾರೆ. ಆದ್ರೆ, ಅವರು ನಮ್ಮನ್ನ ಬಿಟ್ಟು ಹೋಗಿಲ್ಲ ಎಂದು ಸ್ಮರಿಸಿದ್ದಾರೆ.
80 ಅಡಿ ಲಿಂಗ ಸ್ಥಾಪನೆ
ನಾನು ಮತ್ತು ಸಚಿವ ಕೆ.ಎನ್ ರಾಜಣ್ಣನವರು ಅಧಿಕಾರಗಳ ಸಭೆಯನ್ನು ಕರೆದಿದ್ದೇವೆ. 80 ಅಡಿ ಲಿಂಗ ಸ್ಥಾಪನೆ ಮಾಡಿ, ಕರ್ನಾಟಕ ಪ್ರವಾಸೋದ್ಯಮದಲ್ಲಿ ಸಿದ್ದರಬೆಟ್ಟ ಗುರುತಿಸಿದ್ದಾರೆ. ದೇವರಾಯನದುರ್ಗ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ, ಗೊರವನಹಳ್ಳಿ ಎಲ್ಲವನ್ನೂ ಸೇರಿ ಪ್ರವಾಸೋದ್ಯಮದಲ್ಲಿ ಏನೆಲ್ಲಾ ಮಾಡಬೇಕು ಅದನ್ನ ಮಾಡ್ತೇವೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.