ಬೆಂಗಳೂರು: ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಫ್ರೀ ವಿದ್ಯತ್ ನೀಡುವುದಾಗಿ ಈಗಲೇ ಘೋಷಣೆ ಮಾಡಿದೆ. ಇದರ ಬಗ್ಗೆ ಜನರಲ್ಲಿ ಅನೇಕ ಗೊಂದಲವಿದ್ದು, ಇದಕ್ಕೆ ರಾಜ್ಯ ಸರ್ಕಾರವೇ FAQ ರಚಿಸಿ ಜನರ ಗೊಂದಲವನ್ನು ಬಗೆಹರಿಸಲು ಮುಂದಾಗಿದೆ.
ಹೌದು, ಗೃಹಜ್ಯೋತಿ ಯೋಜನೆಯ ಬಗ್ಗೆ ಜನರು ಪದೇ ಪದೇ ಕೆಳಲಾಗುವ ಕೆಲವೊಂದು ಪ್ರಶ್ನೆಗಳನ್ನು ಪಟ್ಟಿ ಮಾಡಿ ಸರ್ಕಾರ ಉತ್ತರಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ …
1. ನಾನು ಈ ಯೋಜನೆಗೆ ಅರ್ಹನೇ..?
ಕರ್ನಾಟಕದ ಎಲ್ಲಾ ಗೃಹ ಬಳಕೆಯ ಗ್ರಾಹಕರು ಈ ಯೋಜನೆ ಅರ್ಹರಾಗಿರುತ್ತಾರೆ.
2. ಈ ಗೃಹ ಜ್ಯೋತಿ ಯೋಜನೆ ಎಂದರೇನು..?
“ಗೃಹ ಜ್ಯೋತಿ” ಕರ್ನಾಟದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್ಗಳನ್ನು ಒಳಗೊಂಡಂತೆ ಉಚಿತ ವಿದ್ಯುತ್ ಅನ್ನು ಒದಗಿಸುವುದು.
3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು..?
ಈ ಯೋಜನೆಯನ್ನು ಪಡೆಯಲು ಪ್ರತಿ ಗೃಹ ಬಳಕೆದಾರ ಸೇವಾ ಸಿಂಧು ವೆಬ್ ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಜೂನ್ 15 ರಿಂದ ಇದರ ಲಿಂಕ್ ಪ್ರಾರಂಭವಾಗುತ್ತದೆ.
4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತಾದೆ..?
ಜುಲೈ 2023 ರಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು ಆಗಸ್ಟ್ನಲ್ಲಿ ನೀಡುವ ಬಿಲ್ಗೆ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.
5. ಈ ಯೋಜನೆಯನ್ನು ನಾನು ಹೇಗೆ ಮತ್ತು ಎಲ್ಲಿ ಪಡೆಯುಬಹುದು..?
ಈ ಯೋಜನೆಯನ್ನು ನಾನು ಪಡೆಯಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಇದರ ಪ್ರಯೋಜವನ್ನು ಪಡೆದುಕೊಳ್ಳಬಹುದು.
6. ಈ ಯೋಜನೆಯನ್ನು ಆಫ್ಲೈನ್ ಮೂಲಕ ನಾನು ಪಡೆಯಬಹುದೇ ..?
ಹೌದು, ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
7. ಈ ಯೋಜನೆ ಪಡೆಯಲು ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು..?
ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ\ ಖಾತೆ ಸಂಖ್ಯೆ ಬಾಡಿಗೆ\ ಭೋಗ್ಯದ ಕರಾರು ಪತ್ರ ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿಯನ್ನು ಸಲ್ಲಿಸುವುದು.
8. ಈ ಅರ್ಜಿ ಸಲ್ಲಿಸಲು ನಾನು ಶುಲ್ಕ ಪಾವತಿಸಬೇಕೆ..?
ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್ನಲ್ಲಿ ಪಾವತಿಸಬೇಕಿರುವುದಿಲ್ಲ.
9. ನಾನು ಜೂನ್ ತಿಂಗಳು ವಿದ್ಯುತ್ ಬಿಲ್ಲನ್ನು ಪಾವತಿಸಬೇಕೆ..?
ಹೌದು,ಈ ಯೋಜನೆಯು ಜುಲೈ ತಿಂಗಳಿಗೆ ಅನ್ವಯಿಸಲಿದ್ದು, 1ನೇ ಆಗಸ್ಟ್ 2023 ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನ್ವಯಿಸುತ್ತದೆ.
10. ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ ನಾನು ಈ ಯೋಜನೆಗೆ ಅರ್ಹನೇ..?
ಇಲ್ಲ ಪ್ರತಿ ಗ್ರಾಹಕರು ಒಂದು ಮೀಟರ್ಗೆ ಮಾತ್ರ ಯೋಜನೆ ಅರ್ಹರಾಗಿರುತ್ತಾರೆ.
11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯುತ್ತೇನೆಯೇ…?
ಹೌದು, ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು ನೋಂದಾಯಿತ ಗ್ರಾಹಕರಿಗೆ ಇಮೇಲ್/SMS ಮೂಲಕ ಕಳುಹಿಸಲಾಗುತ್ತದೆ.
12. ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ, ಯೋಜನೆಯ ಲಾಭವು ಯಾವಾಗ ನನ್ನ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ..?
ಜುಲೈ 23 ರಲ್ಲಿ ನೀಡಿದ ಬಿಲ್ ಅನ್ನು ಯೋಜನೆಯ ಲಾಭ ಇಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಮೀಟರ್ ಓದುವ ದಿನಾಂಕದಿಂದ ಅಂದರೆ 1ನೇ ಆಗಸ್ಟ್2023 ರಂದು ಅಥವಾ ನಂತರ ಅನ್ವಯಿಸುತ್ತದೆ.
13.ನಾನು ಅಪಾರ್ಟೆಂಟ್ (ವಸತಿ ಸಮುಚ್ಚಯ)ಮಾಲೀಕನಾಗಿದ್ದೇನೆ, ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ.?
ಹೌದು, ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಲಭ್ಯವಿದ್ದರೆ/ಸ್ಥಾಪಿಸಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.
14.ನಾನು ಬಾಡಿಗೆದಾರ; ಬಿಲ್ ಮಾಲೀಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ..?
ಹೌದು. ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ, ಬಾಡಿಗೆ/ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯ ದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.
15.ಯೋಜನೆಯ ಅಡಿಯಲ್ಲಿ ಬಾಡಿಗೆ/ಭೋಗ್ಯದಾರನಾಗಿ ನಾನು ನೋಂದಾಯಿಸಲು ಸಲ್ಲಿಸಬೇಕಾದ ದಾಖಲೆಗಳು ಯಾವುವು?
ಬಾಡಿಗೆ/ ಭೋಗ್ಯ ದಾರರು ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು – ಸದರಿ ಯೋಜನೆಯ – ಪ್ರಯೋಜನ ಪಡೆದುಕೊಳ್ಳಲು ಆಧಾರ್ ಜೊತೆಗೆ ಬಾಡಿಗೆ/ ಭೋಗ್ಯದ ಕರಾರು ಪತ್ರವನ್ನು ಸಲ್ಲಿಸುವುದು.
16.ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ..?
ಹೌದು, ಹೊಸ ಸಂಪರ್ಕಕ್ಕಾಗಿ ನಿಯಮಾವಳಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.
17.ನಾನು ಎಷ್ಟು ಉಚಿತ ಯೂನಿಟ್ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯೂನಿಟ್‌ಗಳಿಗೆ ನಾನು ಅರ್ಹನೇ..?
2022-23 ರ ಸರಾಸರಿ ವಿದ್ಯುತ್ ಬಳಕೆ + ಶೇಕಡ 10% ಹೆಚ್ಚಳ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕೀಕರಿಸಲಾಗುತ್ತದೆ.
18.ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು?
ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಲಭ್ಯವಿರುತ್ತದೆ.
19. ಈ ಯೋಜನೆಯನ್ನು ಪಡೆಯಲು ಖಾತೆ ಸಂಖ್ಯೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವೇ?
ಹೌದು, ಗ್ರಾಹಕ ಸಂಖ್ಯೆ/ಖಾತೆ ಸಂಖ್ಯೆ ಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
20. ಒಂದು ವೇಳೆ ನಾನು ಈ ಯೋಜನೆಯ ಫಲಾನುಭವಿಯಾಗಿ, ನನಗೆ ನಿಗದಿ ಪಡಿಸಿರುವ ಉಚಿತ ವಿದ್ಯುತ್ ಗಿಂತ ಜಾಸ್ತಿ ಯೂನಿಟ್ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್ ಗಳಿಗೆ ಪಾವತಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ, ಆ ಹೆಚ್ಚಿನ ಯೂನಿಟ್ ಬಳಕೆಯ ಬಿಲ್ಲನ್ನು ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ?
ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ನಂತರ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.
21.ವಿದ್ಯುತ್ ಬಿಲ್ ನನ್ನ ದಿವಂಗತ ತಂದೆಯ ಹೆಸರಿನಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು?
ವಿದ್ಯುತ್ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು ಮತ್ತು ತದ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲಾ ಉಪ ವಿಭಾಗಗಳಲ್ಲಿನ ಜನ ಸ್ನೇಹಿ ವಿದ್ಯುತ್ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.
22. ನಾನು ವಿದ್ಯುತ್ ಬಿಲ್ ಬಾಕಿಯನ್ನು ಉಳಿಸಿಕೊಂಡಿದ್ದರೆ, ನಾನು ಈ ಯೋಜನೆಗೆ ಅರ್ಹನೇ..?
ಹೌದು. ಆದರೆ, ಜೂನ್ 30 ರವರೆಗಿನ ವಿದ್ಯುತ್ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು, ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
23.ನನ್ನ ಮಾಸಿಕ ಬಳಕೆಯು 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ, ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕೇ..?
ಹೌದು. ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
24. ನನ್ನ ವಿದ್ಯುತ್ ಬಳಕೆಯು ಉಚಿತ ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ, ಬಿಲ್ ಮೊತ್ತ ಏನಾಗುತ್ತದೆ..?
ವಿದ್ಯುತ್ ಬಳಕೆಯು ಅರ್ಹ ಯೂನಿಟ್‌ಗಳಿಗಿಂತ ಕಡಿಮೆಯಿದ್ದರೆ ನೀವು ‘ಶೂನ್ಯ ಬಿಲ್’ ಪಡೆಯುತ್ತೀರಿ.