ಕಲಬುರಗಿ : ಸ್ವಲ್ಪ ಟೈಮ್ ಕೊಡಿ, ಆರನೆಯದ್ದಲ್ಲ, ಏಳನೇ ಗ್ಯಾರಂಟಿಯೂ ಬರುತ್ತೆ. ಎಲ್ಲವನ್ನೂ ಲೀಗಲ್ ಆಗಿಯೇ ಮಾಡ್ತೇವೆ ಎಂದು ಐಟಿ-ಬಿಟಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ತಮ್ಮ ವಿದ್ಯಾಭ್ಯಾಸ ಕೆದಕಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ನನ್ನ ವಿದ್ಯಾರ್ಹತೆ ನನ್ನ ಅಫೀಡವಿಟ್ ನಲ್ಲೇ ಇದೆ. ಅದನ್ನ ನೋಡಿಕೊಳ್ಳೋದಕ್ಕೆ ಹೇಳಿ. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಹೋಗಿ ಅದನ್ನೂ ನೋಡಿಕೊಳ್ಳಲು ಹೇಳಿ. ನ್ಯಾಷನಲ್ ಲಾ ಸ್ಕೂಲ್ ನಲ್ಲೂ ನಾನು ಪಾಸಾಗಿದ್ದೇನೆ. ನಾನು ಮಾಡಿದ ವಿದ್ಯಾಭ್ಯಾಸ ಇವ್ರಿಗೆ ತಿಳಿಯದೇ ಇರಬಹುದು. ಅದಕ್ಕೆ ನಾನೇನು ಉತ್ತರ ಕೊಡೋದಕ್ಕೆ ಆಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕುಮಾರಸ್ವಾಮಿ ತುಂಬಾ ಜವಾಬ್ದಾರಿಯುತ ನಾಯಕ : ಡಿ.ಕೆ ಶಿವಕುಮಾರ್
ಸುಪ್ರೀಂ ಲೀಡರ್ ಅರ್ಹತೆ ಏನು?
ಪ್ರಧಾನಿ ನರೇಂದ್ರ ಮೋದಿಯವ ವಿದ್ಯಾರ್ಹತೆ ಬಗ್ಗೆ ಕೆದಕಿದ ಪ್ರಿಯಾಂಕ್ ಖರ್ಗೆ, ಅವ್ರಿಗೆ ನನ್ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ, ಅವರ ಸುಪ್ರೀಂ ಲೀಡರ್ ಇದ್ದಾರಲ್ಲ ಅವರ ಅರ್ಹತೆ ಏನಿದೆ ಅನ್ನೋದನ್ನ ತಿಳ್ಕೋದಕ್ಕೆ ಹೇಳಿ. ಯಾರಾದ್ರೂ ಪ್ರಧಾನ ಮಂತ್ರಿ ಅವರ ಡಿಗ್ರಿ ತಿಳ್ಕೋಳ್ಳೋಕೆ ಹೋದ್ರೆ ಆರ್ ಟಿ ಐ ನಲ್ಲಿ ಕೊಡಬೇಡಿ ಅಂತಾ ಹೇಳ್ಬಿಟ್ಟಿದ್ದಾರೆ. ಅದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಸ್ ಹಾಕಿದ್ದಾರೆ ಎಂದು ಕುಟುಕಿದ್ದಾರೆ.
ಲೀಗಲ್ ಆಗಿಯೇ ಮಾಡ್ತೇವೆ
ಫಸ್ಟ್ ಅದಕ್ಕೆಲ್ಲಾ ಉತ್ತರ ಕೊಡಲಿ. ನಾನು ಚುನಾಯಿತ ಪ್ರತಿನಿಧಿ, ಜನರು ಆಯ್ಕೆ ಮಾಡಿರೋದು. ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ, ಅದನ್ನೂ ನೋಡ್ತಿದ್ದೇವೆ. ಅದು ಐಟಿ ಆ್ಯಕ್ಟ್ ನಲ್ಲಿ ಬರುತ್ತೆ. ಸ್ವಲ್ಪ ಟೈಮ್ ಕೊಡಿ, ಆರನೆಯದ್ದಲ್ಲ, ಏಳನೇ ಗ್ಯಾರಂಟಿಯೂ ಬರುತ್ತೆ. ಎಲ್ಲವನ್ನೂ ಲೀಗಲ್ ಆಗಿಯೇ ಮಾಡ್ತೇವೆ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.