Sunday, December 22, 2024

ವಾರಾಹಿ ನವರಾತ್ರಿ : ಆಷಾಢ ಮಾಸದಲ್ಲಿ ಆಚರಿಸುವ ‘ಗುಪ್ತ ನವರಾತ್ರಿ’ಯ ಮಹತ್ವವೇನು?

ಬೆಂಗಳೂರು : ವರ್ಷದಲ್ಲಿ 12 ನವರಾತ್ರಿಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ 4 ನವರಾತ್ರಿಗಳನ್ನಾದರೂ ಮಾಡಬೇಕು. ಅದು ಸಾಧ್ಯವಾಗದೇ ಹೋದರೆ ಶರನ್ನವರಾತ್ರಿಯನ್ನಾದರೂ ಮಾಡಬೇಕು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಆಷಾಢ ಮಾಸದ ಗುಪ್ತ ನವರಾತ್ರಿ (ವಾರಾಹಿ ನವರಾತ್ರಿ) ಹಿನ್ನೆಲೆಯಲ್ಲಿ ವಾರಾಹಿ ದೇವಿಯ ಆರಾಧನೆ ಹೇಗೆ? ಅಷ್ಟ ವಿಧ ಆರಾಧನೆ, ವಾರಾಹಿ ದೇವಿಯ ಅವತಾರ ಹಾಗೂ ದೇವಿಯ ಆರಾಧನೆ ಶುಭ ಫಲಗಳು ಏನು? ಎಂಬ ಕುರಿತು ಶ್ರೀಗಳು ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಶರದ್‌ ನವರಾತ್ರಿ ಹಾಗೂ ಮಾರ್ಚ್‌ ಹಾಗೂ ಏಪ್ರಿಲ್‌ ನಲ್ಲಿ ವಸಂತ ನವರಾತ್ರಿ ಆಚರಿಸಲಾಗುತ್ತದೆ. ಆದರೆ, ಹಿಂದೂ ಧರ್ಮದಲ್ಲಿ ಇನ್ನೂ ಎರಡು ನವರಾತ್ರಿಗಳಿವೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಆಚರಿಸುವ ಮಘಾ ನವರಾತ್ರಿ, ಮತ್ತೊಂದು ಜೂನ್‌ ಹಾಗೂ ಜುಲೈನಲ್ಲಿ ಆಚರಿಸುವ ಆಷಾಢ ನವರಾತ್ರಿ ಎಂದು ತಿಳಿಸಿದ್ದಾರೆ.

ವಾರಾಹಿ ದೇವಿಯ ಆರಾಧನೆಯಿಂದಾಗುವ ಲಾಭಗಳು

ಅಷ್ಟ ವಿಧ ರೂಪದಲ್ಲಿ ವಾರಾಹಿ ದೇವಿಯ ಆರಾಧನೆ

ಇದನ್ನೂ ಓದಿ : ಇಂದು ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ : ಯಾವ ರಾಶಿಯವರಿಗೆ ಶುಭ ಫಲ?

ವಾರಾಹಿ ದೇವಿಯ ಆರಾಧನೆ ಯಾವ ರೀತಿ ಮಾಡಬೇಕು?

ಸಿದ್ಧಲಿಂಗೇಶ್ವರ ಗದ್ದುಗೆ ಮಠದಲ್ಲಿಗುಪ್ತ ನವರಾತ್ರಿಆರಾಧನೆ

ಮಹಾ ವಾರಾಹಿಯ ಯಜ್ಞ

ಮಹಾ ಸಿದ್ದಿಪ್ರದವಾದ ಶ್ರೀ ವಾರಾಹಿ ದೇವಿಯು ಬೇಡಿದ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾ ಬರುತ್ತಿದ್ದಾಳೆ. ಇಂತಹ  ಮಹಾವಾರಾಹಿ ದೇವಿಯ ಆರಾಧನೆಯನ್ನು ಶ್ರೀ ಪೀಠದಲ್ಲಿ ಗುಪ್ತ ನವರಾತ್ರಿಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಂದು ದಿನವೂ ವಿಶಿಷ್ಟವಾದ ರೂಪಗಳಿಂದ ಶ್ರೀ ವಾರಾಹಿ ದೇವಿಯ ಆರಾಧನೆ ಹಾಗೂ ಮಹಾ ವಾರಾಹಿಯ ಯಜ್ಞಗಳನ್ನು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿದೆ. ಇಂತಹ ಎಲ್ಲಾ ಮಹಾ ವಾರಾಹಿ ಯಜ್ಞಕ್ಕೆ ಸಕಲರೂ ಭಾಗವಹಿಸಿ ಎಂದು ಶ್ರೀಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES