ಬಾಗಲಕೋಟೆ : ಉಚಿತ ವಿದ್ಯುತ್ ಯೋಜನೆ ಘೋಷಣೆ ಬಳಿಕ ರಾಜ್ಯದ ಜನತೆ ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ, ನಮಗೆ ಅಧಿಕಾರಿಗಳು ಹೆಚ್ಚುವರಿ ಬಿಲ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ 300 ರಿಂದ 400 ರೂಪಾಯಿ ಬರುತ್ತಿದ್ದ ವಿದ್ಯುತ್ ಬಿಲ್ ಈ ಬಾರಿ 2000 ರೂಪಾಯಿ ಬಂದಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಟಕ್ಕೋಡ ಹಾಗೂ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಹೆಚ್ಚುವರಿ ಬಿಲ್ ನೀಡಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ. ಮನೆ ಕರೆಂಟ್ ಬಿಲ್ ಪ್ರತಿ ತಿಂಗಳು 300 ರಿಂದ 350ರೂ ಬರುತ್ತಿತ್ತು. ಕಳೆದ ಒಂದು ತಿಂಗಳ ಮನೆ ಕರೆಂಟ್ ಬಿಲ್ 2000ಕ್ಕೂ ಅಧಿಕ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಮನೆಯವರಿಗೂ ಫ್ರೀ ಅಂದಿದ್ರು, ಈಗ ಇಲ್ಲ ಅಂತಿದ್ದಾರೆ : ಸಿ.ಟಿ ರವಿ
ಬೇಸಿಗೆ ಇರೋದ್ರಿಂದ ರಾತ್ರಿ ಮನೆ ಹೊರಗಡೆ ಮಲಗ್ತೀವಿ. ಪ್ಯಾನ್ ಕೂಡ ಹಾಕಲ್ಲ. ಕಳೆದ ತಿಂಗಳು ಮಾತ್ರ ಹೇಗೆ 200 ಯುನಿಟ್ ಕರೆಂಟ್ ಬಳಕೆ ಆಯ್ತು. ಅದು ಹೇಗೆ ಎಂದು ಪ್ರಶ್ನೆ ಮಾಡಿದ ಗ್ರಾಹಕರು. ಕಳೆದ ತಿಂಗಳ ಬಿಲ್ ನೀಡುವಲ್ಲಿ ಗೋಲ್ ಮಾಲ್ ನಡೆದಿದೆ, ಸರ್ಕಾರ ಸರಿ ಪಡಿಸಬೇಕು. ನಾವು ಹೆಚ್ಚುವರಿ ಬಿಲ್ ಕಟ್ಟಲ್ಲ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜು. 1ರಿಂದ ಗೃಹಜ್ಯೋತಿ ಜಾರಿ
ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರತಿ ಮನೆಗೆ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಆಗಸ್ಟ್ ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದು. ಆದರೆ, ಜುಲೈ 1ರ ವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಕಟ್ಟಬೇಕು. ಈ ಯೋಜನೆಯ ದುರ್ಬಳಕೆ ತಡೆಯಲು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿ ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತ್ ಹೆಚ್ಚುವರಿಯಾಗಿ ನೀಡಲಾಗುವುದು.