Tuesday, October 15, 2024

40+5=45 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತಾರಂತೆ: ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : 40 ಪರ್ಸೆಂಟ್ ಜೊತೆ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ ಇವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಸರ್ಕಾರದಲ್ಲಿ ಪ್ರಾರಂಭಿಕ ಹಂತದ ಅಧಿಕಾರಿಗಳ ಸಭೆ ನಡೆದಿದೆ. ಆ ಸಭೆಯಲ್ಲಿ ಅಧಿಕಾರಿಗಳಿಗೆ ಯಾವ ರೀತಿ ಪಾಠ ಮಾಡಿದ್ದಾರೆ ಇವರು ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಹಾಗೂ ಡಿಸಿಎಂ ಅವರು ಒಂದಿಷ್ಟು ಸೂಚನೆ ಕೊಟ್ಟಿದ್ದಾರೆ. ನಾವು ಹೇಳಿದಂತೆ ಕೇಳಬೇಕು ಅನ್ನೋ ಮಾತು ಹೇಳಿದ್ದಾರೆ. ಬಿಜೆಪಿ ಬಗ್ಗೆ 40 ಪರ್ಸೆಂಟ್ ಬಗ್ಗೆ ಮಾತಾಡಿದವರು ಇವರು. ತಮಟೆ ಹೊಟ್ಕೊಂಡು ಮಾತಾಡಿದ್ರು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ದಂಧೆ ಶುರುವಾಗಿದೆ ಅಂದ್ರು. ಆದರೆ, ಇದನ್ನೆಲ್ಲಾ ಪ್ರೂವ್ ಮಾಡೋಕೆ ಆಗಿಲ್ಲ. ಸರ್ಕಾರ ಬಂದಿದ್ಯಲ್ಲಾ 40 ಪರ್ಸೆಂಟ್ ಸತ್ಯಾಂಶ ಹೊರಗಿಡ್ತಾರಾ? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಸರ್ಕಾರದ ಆರ್ಥಿಕ ತಲೆನೋವು ನಿಮಗ್ಯಾಕೆ? : ಸಿದ್ದರಾಮಯ್ಯ ಗರಂ

ಒಬ್ಬ ಕಾಂಗ್ರೆಸ್ ಎಂಪಿ ಹೇಳಿದ್ರಂತೆ!

ಟೆಂಡರ್ ಸೇರಿದಂತೆ ಅನೇಕ ಅನುದಾನ ತಡೆ ಹಿಡಿದರು. 600 ಕೋಟಿಯಷ್ಟು ವರ್ಕ್ ಆರ್ಡರ್ ಗೆ ಕೊಟ್ಟಿದ್ದರು. ಮೇ 6ರಂದು 675 ಕೋಟಿ ಗುತ್ತಿಗೆದಾರರಿಗೆ, ಕೆಲಸ ಮಾಡಿರುವವರಿಗೆ ಎಲ್ ಒಸಿ ರಿಲೀಸ್ ಆಯ್ತು. ಆ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಸಂಸದ (ಎಂಪಿ) ಹೇಳಿದ್ರಂತೆ, ಯಾವುದೇ ಹಣ ಬಿಡುಗಡೆ ಮಾಡಬೇಡಿ ಅಂತಾ. ಹಣ ಕೊಡೋದನ್ನ ನಿಲ್ಲಿಸಿದ್ದರಂತೆ. ಯಾರಿಗೂ ಹಣ ರಿಲೀಸ್ ಮಾಡಬೇಡಿ, ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿದ್ರಂತೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನೀವು ಯಾವ ಹರಿಶ್ಚಂದ್ರರು?

675 ಕೋಟಿ ಎಲ್ ಒಸಿ ಹಣ ಯಾಕೆ ಬಿಡುಗಡೆ ಆಗಲಿಲ್ಲ? ಈಗ ಹಣ ಬಿಡುಗಡೆ ಆಗಬೇಕು ಅಂದ್ರೆ 5 ಪರ್ಸೆಂಟ್ ಡಿಮ್ಯಾಂಡ್ ಇಟ್ಟಿದ್ದಾರಂತೆ. 40 ಪರ್ಸೆಂಟ್ ಜೊತೆ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ. ಎಲ್ಲಿ ಏನಾಗಿದೆ ಅಂತ ಹೇಳಬೇಕಲ್ಲಾ? ಕೆಲಸ ಮಾಡಿರೋ ಕಾಮಗಾರಿಗೆ 5 ಪರ್ಸೆಂಟ್ ಕೇಳ್ತಾ ಇದ್ದೀರಲಾ, ನೀವು ಯಾವ ಹರಿಶ್ಚಂದ್ರರು? ಎಂದು ಕುಮಾರಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES