ಬೆಂಗಳೂರು : ರಾಜ್ಯದ ಎಲ್ಲಾ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಘೋಷಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಟಾಂಗ್ ಕೊಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಮೊದಲು ಬಸ್ ಬಿಡಿ.. ಆಮೇಲೆ ಉಚಿತ, ಫ್ರೀ ಎಲ್ಲಾ.. ಬಸ್ಸೇ ಇಲ್ಲ, ಪ್ರಯಾಣ ಇನ್ನೆಲ್ಲಿ? ಎಂದು ವ್ಯಂಗ್ಯವಾಡಿದೆ.
ತಾವುಗಳು ಚುನಾವಣಾಪೂರ್ವದಲ್ಲಿ ಹೇಳಿರುವಂತೆ ರಾಜ್ಯದ ಸಮಸ್ತ ಮಹಿಳೆಯರಿಗೆ ಬೇಷರತ್ ಉಚಿತ ಪ್ರಯಾಣ ನೀಡಲೇಬೇಕು. ನೀಡದಿದ್ದರೆ ನಾವು ಬಿಡುವುದೂ ಇಲ್ಲ! ಆದರೆ, ಬಸ್ ಬೇಕಲ್ಲ? ಎಂದು ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
ಇದನ್ನೂ ಓದಿ : 45 ರೂ. ಬದಲಿಗೆ 202 ರೂ. ಟಿಕೆಟ್ ಹರಿದ ಕಂಡಕ್ಟರ್ : ಪ್ರಯಾಣಿಕರು ಕಕ್ಕಾಬಿಕ್ಕಿ!
ಬಸ್ ಸಂಪರ್ಕವೆಂದರೆ ದೂರದಬೆಟ್ಟ!
ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆಯೇ ಇಲ್ಲ. ಅಲ್ಲಿನ ನಿವಾಸಿಗಳಿಗೆ ಸರ್ಕಾರಿ ಬಸ್ ಸಂಪರ್ಕವೆಂದರೆ ದೂರದಬೆಟ್ಟ. ಕರಾವಳಿಯ ಹಲವು ತಾಲೂಕುಗಳು ಇಂದಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದೆ. ಈ ಸಮಸ್ಯೆಗಳಿಗೊಂದು ಯೋಜನೆ ರೂಪಿಸಿ, ಮೊದಲಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡಿ. ಉಳಿದದ್ದು ಮತ್ತೆ ಎಂದು ಕುಟುಕಿದೆ.
ನೀವೇ ಗೊಂದಲ ಕ್ರಿಯೇಟ್ ಮಾಡ್ಬೇಡಿ
ಗೃಹಜ್ಯೋತಿ, ಗೃಹಲಕ್ಷ್ಮೀ ಬಗ್ಗೆ ಯಾವುದೇ ಗೊಂದಲ ಇಲ್ಲ. ಸುಮ್ಮನೆ ನೀವೇ ಗೊಂದಲ ಕ್ರಿಯೇಟ್ ಮಾಡ್ಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನಮ್ಮ ಪ್ರಣಾಳಿಕೆಯಲ್ಲಿ(ಮ್ಯಾನಿಫ್ಯಾಸ್ಟೊದಲ್ಲಿ) ಏನು ಘೋಷಣೆ ಮಾಡಿದ್ದೇವೋ, ಅದನ್ನು ಜಾರಿಗೆ ತರ್ತಾ ಇದ್ದೀವಿ. ನಾವು ನುಡಿದಂತೆ ನಡೆಯುವವರು ಎಂದು ಹೇಳಿದ್ದಾರೆ.