ಬೆಂಗಳೂರು : ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ಭಾರೀ ಆತಂಕ ಮೂಡಿಸಿರುವ ಬಿಪರ್ಜೋಯ್ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದ್ದು ಉತ್ತರ ಈಶಾನ್ಯದೆಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಚಂಡಮಾರುತ ಗೋವಾದಿಂದ ಪಶ್ಚಿಮಕ್ಕೆ 690 ಕಿ.ಮೀ, ಮುಂಬೈನ ಪಶ್ಚಿಮ-ನೈಋತ್ಯಕ್ಕೆ 640 ಕಿ.ಮೀ ಹಾಗೂ ಪೋರಬಂದರ್‌ನಿಂದ ನೈಋತ್ಯಕ್ಕೆ 640 ಕಿ.ಮೀ ದೂರದಲ್ಲಿ ಇದ್ದು, ಗಂಟೆಗೆ 145 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಬಿಪರ್ಜೋಯ್ ಚಂಡಮಾರುತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಯನ್ನು ಉಂಟುಮಾಡುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಕರಾವಳಿ ಭಾಗದಲ್ಲಿ 3 ದಿನ ವರುಣಾರ್ಭಟ, ಯೆಲ್ಲೋ ಅಲರ್ಟ್ ಘೋಷಣೆ
2 ದಿನದಲ್ಲಿ ಮುಂಗಾರು ಪ್ರವೇಶ
ರಾಜ್ಯಕ್ಕೆ ಇನ್ನೆರಡು ದಿನದಲ್ಲಿ ಮುಂಗಾರು ಪ್ರವೇಶ ಮಾಡಲಿದೆ. ಬೆಂಗಳೂರು ಸೇರಿದಂತೆ ಮುಂದಿನ ಜೂನ್ 11ರಿಂದ 5 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಸದಾನಂದ ಹೆಗಡೆ ಮಾಹಿತಿ ನೀಡಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತ ಪ್ರಭಾವ ತಗ್ಗಿದೆ. ಚಂಡಮಾರುತ ಪ್ರಭಾವ ತಗ್ಗಿದ ಹಿನ್ನೆಲೆ ಕರಾವಳಿಯಲ್ಲಿ ಯಾವುದೇ ಪರಿಣಾಮವಿಲ್ಲ. ಇಂದು, ನಾಳೆ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ತಿಳಿಸಿದ್ದಾರೆ.