Monday, December 23, 2024

ಮೋದಿ ಓದಿದ ಶಾಲೆ ಅಧ್ಯಯನ ಕೇಂದ್ರವಾಗಿ ನವೀಕರಣ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಓದಿದ ಶಾಲೆಯನ್ನು ವಿದ್ಯಾರ್ಥಿಗಳ ಅಧ್ಯಯನ ಕೇಂದ್ರವನ್ನಾಗಿ ನವೀಕರಿಸಲಾಗಿದೆ. ಮೂಲಕ ಶಾಲೆಗೆ ವಿಶೇಷ ಗೌರವ ಸಲ್ಲಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿರುವ ವಡ್‌ನಗರದ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಂತದ ಶಿಕ್ಷಣ ಪಡೆದಿದ್ದರು. ಸದ್ಯ ಈ ಶಾಲೆಯನ್ನು ಭಾರತೀಯ ಪುರಾತತ್ವ ಇಲಾಖೆಯು ನವೀಕರಿಸಿದೆ.

ಇದನ್ನೂ ಓದಿ : ದೇವೇಗೌಡ್ರು ಈಗ ಪ್ರಧಾನಿ ಆಗಿದ್ರೆ ಪಾಕಿಸ್ತಾನ ಸಮಸ್ಯೆಗೆ ತೆರೆ ಹೇಳೆಯುತ್ತಿದ್ರು : ಫಾರೂಕ್ ಅಬ್ದುಲ್ಲಾ

‘ಪ್ರೇರಣಾ: ದಿ ವರ್ನಾಕ್ಯುಲರ್‌ ಸ್ಕೂಲ್‌’ ಯೋಜನೆ ಭಾಗವಾಗಿ ಇದನ್ನು ವಿದ್ಯಾರ್ಥಿಗಳ ಅಧ್ಯಯನ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ 2024ರಿಂದ ದೇಶದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಈ ಶಾಲೆಗೆ ಭೇಟಿ ನೀಡಿ, ಒಂದು ವಾರದ ಮಟ್ಟಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಅನುಕೂಲ ಕಲ್ಪಿಸಲಾಗಿದೆ.

1888ರಲ್ಲಿ ಸ್ಥಾಪನೆಯಾದ ಶಾಲೆಯು 2018ರವರೆಗೆ ಕಾರ್ಯನಿರ್ವಹಿಸಿದೆ. ಸದ್ಯ ಶಾಲೆಯನ್ನು ವಸ್ತು ಸಂಗ್ರಹಾಲಯದ ಮಾದರಿಯಲ್ಲಿ ಅಭಿವದ್ಧಿಪಡಿಸಲಾಗಿದೆ. ವರ್ಷಕ್ಕೆ 30 ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಿಂದ ಈ ಶಾಲೆಗೆ ಪ್ರವಾಸ ಕೈಗೊಳ್ಳಲು ಅನುಕೂಲ ಕಲ್ಪಿಸಲಾಗುತ್ತಿದೆ. ಅವರ ಎಲ್ಲ ವೆಚ್ಚಗಳನ್ನು ಸರಕಾರವೇ ಭರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES