Wednesday, January 22, 2025

ಪ್ರೇಯಸಿ ಮೇಲೆ ಪ್ರಿಯಕರ ಹಾಗೂ ಸ್ನೇಹಿತನಿಂದ ಅತ್ಯಾಚಾರ!

ಬೆಂಗಳೂರು : ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಹಾಗೂ ಸ್ನೇಹಿತನಿಂದ ಅತ್ಯಾಚಾರ ಎಸಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಪ್ರಿಯಕರ ಪುರುಷೋತ್ತಮ್ ತನ್ನ ಸ್ನೇಹಿತ ಚೇತನ್ ಎಂಬಾತನೊಂದಿಗೆ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಪಾಪಿ ಪ್ರೇಮಿ. ಈ ಸಂಬಂಧ ಬೆಂಗಳೂರಿನ ಗಿರಿನಗರ ಪೊಲೀಸರು ಆರೋಪಿಗಳಾದ ಪುರುಷೋತ್ತಮ್ ಹಾಗೂ ಆತನ ಸ್ನೇಹಿತ ಚೇತನ್ ನನ್ನು ಅರೆಸ್ಟ್ ಮಾಡಿದ್ದಾರೆ.

ಸಂತ್ರಸ್ತ ಯುವತಿ ಹಾಗೂ ಪ್ರಿಯಕರ ಪುರುಷೋತ್ತಮ್ ಇಬ್ಬರೂ ತುಮಕೂರು ಜಿಲ್ಲೆ ಕೊರಟಗೆರೆ ನಿವಾಸಿಗಳು. ಜೂನ್ 6ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುರುಷೋತ್ತಮ್ ಹಾಗೂ ಸಂತ್ರಸ್ತ ಯುವತಿ ಒಂದು ವರ್ಷದಿಂದ ಲವ್ ಮಾಡುತ್ತಿದ್ದರು. ಯುವತಿ ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ವಿಧ್ಯಾಬ್ಯಾಸ ಮಾಡಿಕೊಂಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ : ಲವರ್​ಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಫ್ರೆಂಡ್​

ಮೊಬೈಲ್ ಕೊಡುವುದಾಗಿ ಕರೆದು ಅತ್ಯಾಚಾರ

ಸಂತ್ರಸ್ತ ಯುವತಿ ಪುರುಷೋತ್ತಮ್ ಗೆ ಎರಡು ದಿನಗಳ ಹಿಂದೆ ಕರೆ ಮಾಡಿದ್ದಳು. ತನಗೆ ಮೊಬೈಲ್​ ಬೇಕು ಎಂದು ಕೇಳಿದ್ದಳು. ಬೆಂಗಳೂರಿಗೆ ಬಾ ಮೊಬೈಲ್ ಕೊಡುತ್ತೇನೆ ಎಂದು ಹೇಳಿದ್ದನು. ಅದರಂತೆ, ಜೂನ್ 6ರಂದು ಯುವತಿ ಮೆಜೆಸ್ಟಿಕ್ ​ಗೆ ಬಂದಿದ್ದಳು. ಯುವತಿಯನ್ನು ಗಿರಿನಗರದ ಸ್ನೇಹಿತನ ರೂಮ್​ಗೆ ಕರೆದುಕೊಮಡು ಹೋಗಿದ್ದ. ಆಗ ನನ್ನ ಮೊಬೈಲ್ ಕೊಡು ನಾನು ಊರಿಗೆ ಹೋಗುತ್ತೇನೆ ಎಂದು ಯುವತಿ ಕೇಳಿದ್ದಾಳೆ. ಆರೋಪಿ ಯುವತಿಗೆ ಮೊಬೈಲ್ ನೀಡದೆ ಬಲವಂತವಾಗಿ ಸ್ನೇಹಿತನೊಂದಿಗೆ ಅತ್ಯಾಚಾರ ಎಸೆಗಿದ್ದಾನೆ.

ಸಂತ್ರಸ್ತ ಯುವತಿ ಜೋರಾಗಿ ಕಿರುಚಾಡಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗಿರಿನಗರ ಪೊಲೀಸರು ಯುವತಿಯನ್ನು ರಕ್ಷಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES