ಬೆಂಗಳೂರು : ಸಿ.ಟಿ ರವಿ ಮನೆಯವರಿಗೂ ಫ್ರೀ ಅಂತ ಹೇಳಿದ್ರು. ಈಗ ಐ.ಟಿ ಕಟ್ಟೋರಿಗಿಲ್ಲ, ಸರ್ಕಾರಿ ನೌಕರರಿಗೆ ಇಲ್ಲ ಅತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಐದು ಉಚಿತ ಗ್ಯಾರಂಟಿ ಗೊಂದಲ ಬಗೆಹರಿಸಬೇಕು. ಅದು ನನ್ನ ಆಗ್ರಹ. ನನಗೂ ಫ್ರೀ, ನಿನಗೂ ಫ್ರೀ ಅಂದಿದ್ರು. ಎಲ್ಲಾ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೆಡ್ಗೆವಾರ್ ದೇಶ ಭಕ್ತ
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಪ್ರತಿಕ್ರಿಯಿಸಿರುವ ಅವರು, ಇಂಟಾಲರೆನ್ಸ್ ಅನ್ನೋದು ಇರುತ್ತೆ. ಹೆಡ್ಗೆವಾರ್ ಅವರು ದೇಶ ಭಕ್ತ. ಅವರನ್ನು ಬದಲಿಸೋ ಮನಸ್ಥಿತಿ ಇವರದ್ದು. ಮಾರ್ಕ್ಸ್, ಮಾವೋ ಒಪ್ಪಬಹುದು, ಹೆಗ್ಡೆವಾರ್ ಬದಲಾವಣೆ ಮಾಡಬೇಕು ಅನ್ನೋದು ಅವರ ಮನಸ್ಥಿತಿ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಏನು ಮಾಡ್ತಾರೆ ನೋಡೋಣ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಅಂದ್ರೆ ಕನ್ನಡಕ್ಕೆ ‘ಕಂಟಕ ರವಿ’ : ಕಾಂಗ್ರೆಸ್ ಲೇವಡಿ
ವಿಪಕ್ಷ ನಾಯಕರ ಆಯ್ಕೆ ಯಾವಾಗ?
ವಿಪಕ್ಷ ನಾಯಕರ ಆಯ್ಕೆ ವಿಚಾರ ಮಾತನಾಡಿರುವ ಅವರು, ಶಾಸಕರ ವ್ಯಕ್ತಿಗತ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಅರುಣ್ ಸಿಂಗ್ ಅವರು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಹೈಕಮಾಂಡ್ ಜೊತೆ ಚರ್ಚಿಸಿ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ ಎಂದು ಸಿ.ಟಿ ರವಿ ಮಾಹಿತಿ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಬಂದಿಲ್ಲ. ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದೆ. ಆ ವಿಚಾರ ಮಾತ್ರ ಚರ್ಚೆಯಾಗಿದೆ ಎಂದು ಹೇಳಿದ್ದಾರೆ.