Thursday, October 31, 2024

ಮೊಮ್ಮಗನಿಗೆ ಕವಳಿ ಹಣ್ಣು ಕಿತ್ತು ಕೊಟ್ಟು ಮನೆಗೆ ಕಳಿಸಿದ್ದ ತಾತ, ಶವವಾಗಿ ಪತ್ತೆ

ಶಿವಮೊಗ್ಗ : ಮೂರು ವರ್ಷದ ಮೊಮ್ಮಗನೊಂದಿಗೆ ಜಮೀನಿಗೆ ತೆರಳಿದ್ದ ವೃದ್ದರೊಬ್ಬರು, ಅಲ್ಲಿಯೇ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಬಿ.ಕೆ ಲೋಕಪ್ಪ (68) ಮೃತಪಟ್ಟ ವೃದ್ದ ಕೃಷಿಕರಾಗಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಪುರಮಠ ನಿವಾಸಿ. ಬಿ.ಕೆ ಲೋಕಪ್ಪ ಅವರು, ನಿನ್ನೆ ತಮ್ಮ ಮೊಮ್ಮಗನೊಂದಿಗೆ ಜಮೀನಿಗೆ ತೆರಳಿದ್ದರು. ಅಲ್ಲಿಯೇ ಬಿಟ್ಟಿದ್ದ ಕವಳಿ ಹಣ್ಣುಗಳನ್ನು ಮೊಮ್ಮಗನಿಗೆ ಕಿತ್ತು ಕೊಟ್ಟು ಮನೆಗೆ ಕಳಿಸಿದ್ದರು. ಆದರೆ, ಬಹಳ ಹೊತ್ತಾದರೂ, ಮನೆಗೆ ಹಿಂದಿರುಗಿರಲಿಲ್ಲ.

ಮನೆಗೆ ಬಾರದ ಲೋಕಪ್ಪರನ್ನು ಕುಟುಂಬಸ್ಥರು ಹುಡುಕಾಡಿದ್ದಾರೆ. ಜಮೀನಿನ ಬಳಿ ಹೋದಾಗ ಹಕ್ಕಲಿನಲ್ಲಿ ಲೋಕಪ್ಪರವರ ಮೃತ ದೇಹ  ಪತ್ತೆಯಾಗಿದೆ. ಹೃದಯ ಘಾತದಿಂದ ಕುಸಿದು ಬಿದ್ದು ಸಾವನಪ್ಪಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ : ಕ್ವಾರಿ ನೀರಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು

ಮರದ ದಿಮ್ಮಿ ಬಿದ್ದು ಯುವಕ ಸಾವು

ಮರದ ದಿಮ್ಮಿ ಮೈಮೇಲೆ ಬಿದ್ದು ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಉದುಮನಹಳ್ಳಿ ಗ್ರಾಮದ ಮಂಜುನಾಥ್ (32) ಮೃತ ಯುವಕ. ಟಿಂಬರ್ ಕೆಲಸಕ್ಕೆ ಅಂಕಿಹಳ್ಳಿ ಗ್ರಾಮಕ್ಕೆ ಮಂಜುನಾಥ್ ಹಾಗೂ ಇತರರು ತೆರಳಿದ್ದರು.

ಮರದ ದಿಮ್ಮಿಯನ್ನು ಹಗ್ಗಕಟ್ಟಿ ಟ್ರಾಕ್ಟರ್ ಗೆ ತುಂಬುತಿದ್ದ ವೇಳೆ ಮಂಜುನಾಥನ ಮೇಲೆ ಮರದ ದಿಮ್ಮಿ ಜಾರಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES