Sunday, November 3, 2024

ದೇವೇಗೌಡ್ರು ಈಗ ಪ್ರಧಾನಿ ಆಗಿದ್ರೆ ಪಾಕಿಸ್ತಾನ ಸಮಸ್ಯೆಗೆ ತೆರೆ ಹೇಳೆಯುತ್ತಿದ್ರು : ಫಾರೂಕ್ ಅಬ್ದುಲ್ಲಾ

ಬೆಂಗಳೂರು : ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್​.ಡಿ.ದೇವೇಗೌಡರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಉಭಯ ನಾಯಕರ ಭೇಟಿ ಭಾರೀ ಕುತೂಹಲ ಹುಟ್ಟು ಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು, ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರದ ಪ್ರಮುಖ ನಾಯಕರು. ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಇದು ಒಂದು ಸೌಹಾರ್ದಯುವಾದ ಭೇಟಿಯಾಗಿದೆ ಎಂದು ಹೇಳಿದ್ದಾರೆ.

ಯಾವುದೇ ರೀತಿಯ ರಾಜಕೀಯ ಬೆಳವಣಿಗೆ ಬಗ್ಗೆ ಮುಂದಿನ 2024ರ ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ. ಅವರು ಈ ದಿನ ದೇವೇಗೌಡ ಭೇಟಿಯಾಗಲು ಕಾರಣ, ಕಳೆದ ಕೆಲವು ದಿನಗಳ ಹಿಂದೆ ದೇವೇಗೌಡ್ರ ಆರೋಗ್ಯ ಸಮಸ್ಯೆ ಏನೂ ಇತ್ತು. ಆ ವಿಷಯ ಗೊತ್ತಾಗಿ ದೇವೇಗೌಡ್ರ ಭೇಟಿಯಾಗಲು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ, ಇದರಲ್ಲಿ ಮುಚ್ಚುಮರೆ ಏನಿದೆ? : ಹೆಚ್.ಡಿ ದೇವೇಗೌಡ

ಪಾಕಿಸ್ತಾನದ ಸಮಸ್ಯೆಗೆ ಸಂಪೂರ್ಣ ತೆರೆ

ನಿಮ್ಮಂತ ಪ್ರಧಾನ ಮಂತ್ರಿ ಈ ದೇಶದಲ್ಲಿ ಇದ್ದಿದ್ದರೆ, ಇವತ್ತು ಇಂಡಿಯಾ ಪಾಕಿಸ್ತಾನದ ಸಮಸ್ಯೆಗಳಿಗೆ ಸಂಪೂರ್ಣವಾದ ತೆರೆ ಹೇಳೆಯುತ್ತಿದ್ರಿ. ಸೌಹಾರ್ದಯುತವಾಗಿ ಏನೂ ಇಂಡಿಯಾ ಪಾಕಿಸ್ತಾನ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿದ್ರಿ. ಅದನ್ನು ಇವತ್ತು ಸಹ ನೆನಪಿಸಿಕೊಳ್ಳುತ್ತೇವೆ. ಪ್ರಧಾನಿ ಮಂತ್ರಿಗಳಾಗಿ ಓಪನ್ ಜೀಪ್ ನಲ್ಲಿ ಎರಡು ದೇಶಗಳಿಗೆ ನೀವು ಕೊಟ್ಟ ಸಂದೇಶ. ಇವತ್ತು ಸಹ ಮರೆಯಲು ಸಾಧ್ಯವಿಲ್ಲ ಅಂತಾ ಹಲವಾರು ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ರು ಎಂದಿದ್ದಾರೆ.

ನೀವು ಆಶಾಭಾವನೆ ಮುಡಿಸಿದ್ರಿ

ಜಮ್ಮು ಕಾಶ್ಮೀರ ಜನರಲ್ಲಿ ವಿಶ್ವಾಸ ಮೂಡಿಸಲು ಮತ್ತು ಪಾಕಿಸ್ತಾನದ ಅಲ್ಲಿಯ ಜನರಲ್ಲಿ ಏನೂ ಹೊಂದಾಣಿಕೆ ಆಗಬೇಕು ಭಾವನೆ ಇದೆ. ಅದಕ್ಕೆ ನೀವು ಆಶಾಭಾವನೆ ಮುಡಿಸಿದ್ರಿ ಅವತ್ತಿನ ದಿನಗಳ ಬಗ್ಗೆ ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ರು. ಎಲ್ಲಾ ವಿಚಾರಗಳನ್ನು ಹೃದಯ ತುಂಬಿ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES