Friday, July 19, 2024

ಮಸೀದಿ, ದರ್ಗಾಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಚೋರ ಅಂದರ್ : ಕಾರಣ ಏನು ಗೊತ್ತಾ?

ಹಾಸನ : ಮಸೀದಿ ಹಾಗೂ ದರ್ಗಾಗಳನ್ನೇ ಟಾರ್ಗೆಟ್ ಮಾಡಿ ಸ್ವೀಕರ್, ಕ್ಯಾಮೆರಾ ಸೇರಿ ಹಲವು ವಸ್ತುಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್‌ ಸುಹೇಬ್ (35) ಬಂಧಿತ ಆರೋಪಿ. ಈತ ವಿರಾಜಪೇಟೆಯ ಸುನ್ನತ್ ಬೀದಿಯ ನಿವಾಸಿ. ಬಂಧಿತನಿಂದ 5,35,000 ರೂ. ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಆರೋಪಿಯಿಂದ 7 ಆಂಪ್ಲಿಪ್ಲೇಯರ್, 6 ಸಿಸಿ ಕ್ಯಾಮೆರಾಗಳು, 1 ಕಂಪ್ಯೂಟರ್, 1 ಟಿವಿ, 1 ಸೌಂಡ್ ಮಿಕ್ಸರ್, 2 ಸ್ಪೀಕರ್, 2 ಮಾನಿಟರ್, 1 ಡಿವಿಆರ್, ಬೀಗ ಹೊಡೆಯಲು ಬಳಸುತ್ತಿದ್ದ ಕಬ್ಬಿಣದ ರಾಡ್, 2 ಸ್ಪೀಕರ್ ಇರುವ ಹೋಂ ಥಿಯೇಟರ್, ಸಿಸಿ ಕ್ಯಾಮೆರಾ ಸ್ವಿಚ್, ಒಂದು ಮಾನಿಟರ್, ಕ್ಯಾನೆನ್ ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : 20 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಮಸೀದಿಗಳೇ ಟಾರ್ಗೆಟ್

ಮೈಸೂರಿನ ಇಲವಾಲದ ರಬ್ಬಾನಿ ಮಸೀದಿ, ಬಿಳಿಕೆರೆಯ ಈದ್ಗಾ ಮಸೀದಿ, ಪಿರಿಯಾಪಟ್ಟಣದ ಪಿರ್ದೋಸ್ ಮಸೀದಿ, ಹಳೆ ಹುಣಸೂರಿನ ಗೌಸಿಯಾ ಮಸೀದಿ, ಕೆ.ಆರ್.ನಗರದ ಜಾಮೀಯಾ ಮಸೀದಿ, ಹಾಸನದ ಕುಬಾ ಮಸೀದಿ ಮತ್ತು ಗುಜರಾತಿ ದರ್ಗಾ, ಗಂಡಸಿಯ ಮದಿನಾ ಮಸೀದಿ, ಅರಸೀಕೆರೆ ನಗರದ ಜಾಮೀಯಾ ಮಸೀದಿ ಮತ್ತು ಖಾದರ್ ಚಾವಲಿ ದರ್ಗಾಗಳಲ್ಲಿ ಮೊಹಮ್ಮದ್‌ ಸುಹೇಬ್ ಕೈಚಳಕ ತೋರಿದ್ದನು.

ಜಮಾತ್‌ ನಿಂದ ಉಚ್ಛಾಟನೆಯೇ ಕಾರಣ

ಕಳ್ಳತನ ಮಾಡಿದ ವಸ್ತುಗಳನ್ನು ಶ್ರೀರಂಗಪಟ್ಟಣದ ಮನೆಯೊಂದರಲ್ಲಿ ಇಟ್ಟು ನಂತರ ಮಾರಾಟ ಮಾಡುತ್ತಿದ್ದನು. ಹತ್ತು ಮಸೀದಿ ಹಾಗೂ ದರ್ಗಾಗಳಲ್ಲಿ ಕಳ್ಳತನ ಮಾಡಿದ ಈತ, ಒಟ್ಟು ಎಂಟು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು. ಮದುವೆಯಾದ ನಂತರ ಈತನನ್ನು ಜಮಾತ್‌ನಿಂದ ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಮೊಹಮ್ಮದ್ ಸುಹೇಬ್ ದರ್ಗಾ, ಮಸೀದಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES