Friday, March 29, 2024

ಬರೋಬ್ಬರಿ 1.1 ಲಕ್ಷ ಕೊಟ್ಟು ‘ಬಂಡೂರು ತಳಿ ಟಗರು’ ಖರೀದಿಸಿದ ರೈತ

ಮಂಡ್ಯ : ಬರೋಬ್ಬರಿ 1.1 ಲಕ್ಷ ರೂಪಾಯಿ ಕೊಟ್ಟು ಮಂಡ್ಯ ರೈತ ಬಂಡೂರು ತಳಿ ಟಗರನ್ನು ಖರೀದಿಸಿದ್ದಾರೆ. ಈ ಟಗರು ರಾಜ್ಯದಲ್ಲಿ ರುಚಿಯಾದ ಮಾಂಸಕ್ಕೆ ಪ್ರಖ್ಯಾತಿ ಹೊಂದಿದೆ.

ಹೌದು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಚ್ಚೇಗೌಡನದೊಡ್ಡಿ ಗ್ರಾಮದ ಮರೀಗೌಡ ಎಂಬುವವರೇ ದುಬಾರಿ ಹಣಕ್ಕೆ ಬಂಡೂರು ತಳಿಯ ಟಗರು ಖರೀದಿಸಿದ ರೈತ.

ದೇವಿಪುರ ಗ್ರಾಮದಲ್ಲಿ ಖರೀದಿ ಮಾಡಿ ತಂದ ಟಗರನ್ನು ಅದ್ದೂರಿ ‌ಮೆರವಣಿಗೆ ಮೂಲಕ ಮನೆಗೆ ಬರಮಾಡಿಕೊಂಡಿದ್ದಾರೆ. ಹುಸ್ಕೂರು ಗ್ರಾಮದಿಂದ ಹುಚ್ಚೇಗೌಡನ ದೊಡ್ಡಿವರೆಗೂ ಮೆರವಣಿಗೆ ನಡೆಸಲಾಗಿದೆ.

ದುಬಾರಿ ಹಣ ನೀಡಿ ಖರೀದಿ ಮಾಡಿದ ಬಂಡೂರು ತಳಿಯ ಟಗರನ್ನು ಜನತೆ ಕುತೂಹಲದಿಂದ ನೋಡಿ ಕಣ್ತುಂಬಿಕೊಂಡಿದ್ದಾರೆ. ಹುಸ್ಕೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಅಂತರವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಮಂದಿಯಿಂದ ಟಗರು ವೀಕ್ಷಣೆಗೆ ಜಮಾಯಿಸಿದ್ದರು.

ಇದನ್ನೂ ಓದಿ : ಸಕ್ರೆಬೈಲಿನಲ್ಲಿ ಮೂರು ಆನೆಗಳಿಗೆ ನಾಮಕರಣ : ಹೆಸರು ಏನು ಗೊತ್ತಾ?

ಟಗರನ್ನೇ ಖರಿದಿಸಿದ್ದು ಯಾಕಂದ್ರೆ..!

ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಮರೀಗೌಡ, ಬಂಡೂರು ತಳಿಯ ಟಗರು ರಾಜ್ಯದಲ್ಲಿ ರುಚಿಯಾದ ಮಾಂಸಕ್ಕೆ ಹೆಸರುವಾಸಿಯಾಗಿದೆ. ಈ ತಳಿಯ ಕುರಿಯನ್ನು ಸಂವರ್ಧನೆ ಮಾಡಬೇಕು ಎಂದು ಖರೀದಿಸಿದ್ದೇನೆ ಎಂದು ಹೇಳಿದ್ದಾರೆ.

ಟಗರು ಅತ್ಯಂತ ದಷ್ಟ ಪುಷ್ಟವಾಗಿದೆ

ನಾನು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಬಳಿ 50ಕ್ಕೂ ಹೆಚ್ಚು ಸಾಮಾನ್ಯ ತಳಿಯ ಟಗರುಗಳಿವೆ. ಈ ಟಗರಿಗೆ 18 ತಿಂಗಳು ತುಂಬಿದೆ. ಬರೋಬ್ಬರಿ 1.1 ಲಕ್ಷ ರೂ. ನೀಡಿ ಖರೀದಿ ಮಾಡಿದ್ದೇನೆ. ಟಗರು ಅತ್ಯಂತ ದಷ್ಟ ಪುಷ್ಟವಾಗಿದೆ. ಕುರಿ ಸಾಕಣೆ ನನ್ನ ಆದಾಯದ ಮೂಲವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES