ಬೆಂಗಳೂರು : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಎಲ್ಲಾ ವರ್ಗಗಳ ಮಹಿಲೆಯರಿಗೆ ರಾಜ್ಯದೊಳಗೆ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ, ರಾಜಹಂಸ, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಸೇರಿ ಐಷಾರಾಮಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಮಾರ್ಗಸೂಚಿ ಬಿಡುಗಡೆ
- ಶಕ್ತಿ ಯೋಜನೆಯಡಿ ಮಹಿಳೆರಿಗೆ ಉಚಿತ ಬಸ್ ಪ್ರಯಾಣಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ
- ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಯಿಂದ ಮಾರ್ಗಸೂಚಿ ಬಿಡುಗಡೆ
- ರಾಜ್ಯದೊಳಗಿನ ಪ್ರಯಾಣಿಕರಿಗೆ ಮಾತ್ರ ಅವಕಾಶ
- ಐಶರಾಮಿ ಎಸಿ, ನಾನ್ ಎಸಿ ರಾಜಹಂಸ, ಸ್ಲೀಪರ್ ಕೋಚ್, ವಜ್ರ, ವಾಯುವಜ್ರ, ಐರಾವತ, ಅಂಬಾರಿ ಬಸ್‌ಗಳಲ್ಲಿ ಉಚಿತವಿಲ್ಲ
- ಬಿಎಂಟಿಸಿ ಹೊರತು ಪಡಿಸಿ ಉಳಿದೆಲ್ಲಾ ಸಾರಿಗೆಗಳಲ್ಲಿ ಪುರುಷರಿಗೆ ಶೇ. 50% ಆಸನಗಳು ಮೀಸಲು
- ಶಕ್ತಿ ಕಾರ್ಡ್ ದತ್ತಾಂಶ ಆಧರಿಸಿ ಉಚಿತ ಪ್ರಯಾಣದ ವೆಚ್ಚವನ್ನ ಸಾರಿಗೆ ನಿಗಮಗಳಿಗೆ ಸರ್ಕಾರವೇ ಭರಿಸಲಿದೆ
- ಮೂರು ತಿಂಗಳೊಳಗೆ ಸೇವಾ ಸಿಂಧು ಮೂಲಕ ಅರ್ಜಿ ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ
- ಅಲ್ಲಿಯವರೆಗೆ ಸರ್ಕಾರ ನೀಡಿರುವ ಯಾವುದಾದರೊಂದು ಗುರತಿನ ಚೀಟಿ ಪರಿಗಣಿಸಿ ಉಚಿತ ಪ್ರಯಾಣ ಟಿಕೆಟ್ ನೀಡುವುದು
ಇದನ್ನೂ ಓದಿ : ಜುಲೈ 7ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು : ಸಿದ್ದರಾಮಯ್ಯ
ಜೂನ್ 11ರಂದು ಜಾರಿ
ರಾಜ್ಯದ ಎಲ್ಲಾ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ಎಸಿ ಹಾಗೂ ಲಕ್ಷುರಿ ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣ (ರಾಜ್ಯದೊಳಗೆ ಮಾತ್ರ)ಕ್ಕೆ ಅವಕಾಶ ಕಲ್ಪಿಸಲಾಗುವುದು. ಜೂನ್ 11 ರಂದು ‘ಶಕ್ತಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಶೇ. 94 ರಷ್ಟು ಮಹಿಳೆಯರು ಯೋಜನೆಯ ಲಾಭ ಪಡೆಯಲಿದ್ದಾರೆ. ಬಸ್ ಗಳಲ್ಲಿ ಪುರುಷರಿಗೆ ಶೇ.50 ರಷ್ಟು ಆಸನ (ಸೀಟು) ಮೀಸಲಿಡಲಾಗುತ್ತದೆ.